ಮಸ್ಕಿ: ಪಟ್ಟಣದ ಲಿಂಗಸುಗೂರು ರಸ್ತೆಯಲ್ಲಿನ ನಾಯರ ಪೆಟ್ರೊಲ್ ಬಂಕ್ ಬಳಿ ಸಿಂಹವೊಂದು ಪತ್ಯಕ್ಷವಾಗಿದೆ ಎಂಬ ನಕಲಿ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಆತಂಕ ಸೃಷ್ಟಿಸಿತ್ತು.
ಕೆಲ ಕಿಡಿಗೇಡಿಗಳು ಬುಧವಾರ ರಾತ್ರಿ ನಾಯರ ಪೆಟ್ರೊಲ್ ಬಂಕ್ ಸಿಂಹ ತಿರುಗಾಡುತ್ತಿದೆ ಎಂದು ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ನೂರಾರು ಜನ ಪೆಟ್ರೂಲ್ ಬಂಕ್ ವ್ಯವಸ್ಥಾಪಕ, ಮಾಲೀಕರಿಗೆ ಕರೆ ಮಾಡಿ ವಿಚಾರಿಸತೊಡಗಿದರು.
ರಾತ್ರಿಯ ಬೀಟ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಇದು ನಕಲಿ ವಿಡಿಯೊ ಎಂದು ಸ್ಪಷ್ಟಪಡಿಸಿದರು.
ನಾಯರ ಪೆಟ್ರೂಲ್ ಬಂಕ್‌ಗಳು ಒಂದೇ ಮಾದರಿಯಲ್ಲಿದು ಇದು ಬೇರೆ ಯಾವುದೋ ಹೆದ್ದಾರಿ ಪಕ್ಕದ ದೃಶ್ಯ, ಮಸ್ಕಿಯದ್ದಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟಣೆ ಕೊಡುವ ಮೂಲಕ ಆತಂಕಕ್ಕೆ ತೆರೆ ಎಳೆಯಲಾಯಿತು.