ಸೋಮವಾರ, ಮೇ 10, 2021
21 °C

ಬೆಲೆ ಏರಿಕೆ ಬಿಜೆಪಿ ಸರ್ಕಾರದ ಸಾಧನೆ: ಡಾ.ಯತೀಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಲ್ಲದಗುಡ್ಡ (ಕವಿತಾಳ): ‘ಬಿಜೆಪಿ ದುರಾಡಳಿತದಿಂದ ರಸಗೊಬ್ಬರ ಬೆಲೆ ಮತ್ತು ನಿತ್ಯ ಬಳಕೆ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದು ಜನ ಸಾಮಾನ್ಯರು ಜೀವನ ನಡೆಸುವುದು ದುಸ್ತರವಾಗಿದೆ. ಬೆಲೆ ಏರಿಕೆಯೇ ಬಿಜೆಪಿ ಸರ್ಕಾರದ ಸಾಧನೆ’ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.

ಮಲ್ಲದಗುಡ್ಡ ಗ್ರಾಮದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯ ಮತ್ತು ಕೇಂದ್ರದಲ್ಲಿರುವುದು ಬಡವರ ಪರ ಸರ್ಕಾರವಲ್ಲಿ ಶ್ರೀಮಂತರ ಪರ ಸರ್ಕಾರ, ಸಮ್ಮಿಶ್ರ ಸರ್ಕಾರ ಜಾರಿಗೆ ತಂದಿದ್ದ ಅನೇಕ ಯೋಜನೆಗಳನ್ನು ರದ್ದುಗೊಳಿಸುವ ಮೂಲಕ ಬಿಜೆಪಿ ಸರ್ಕಾರ ರಾಜ್ಯದ ಜನತೆಗೆ ದ್ರೋಹ ಎಸಗುತ್ತಿದೆ’ ಎಂದರು.

ಶಾಸಕರಾದ ಅನಿಲ್‍ ಚಿಕ್ಕಮಾದ, ಬಸನಗೌಡ ದದ್ದಲ ಮತ್ತು ಮುಖಂಡ ಕೆ.ಕರಿಯಪ್ಪ ಮಾತನಾಡಿದರು.

ಮುಖಂಡರಾದ ಕೇಶವರಾವ್‍, ಅಯ್ಯಪ್ಪ ವಕೀಲ, ಪಿ.ವಾಸು, ಗಿರಿಜಯ್ಯಸ್ವಾಮಿ, ಮಂಜುನಾಥ, ಮಲ್ಲಯ್ಯ ಗೋರ್ಕಲ್‍ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು