ಸೋಮವಾರ, ಮೇ 17, 2021
26 °C

ಮಸ್ಕಿ ಉಪಚುನಾವಣೆ| ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಸೊಸೆ, ಮಗಳಿಂದ ಮತಯಾಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಸ್ಕಿ: ಬಿಜೆಪಿ‌ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರ ಪುತ್ರಿ ಪ್ರೀತಿ ಪಾಟೀಲ ಹಾಗೂ ಸೊಸೆಯರಾದ ರಾಜೇಶ್ವರಿ ವಿ. ಪಾಟೀಲ, ವರ್ಷಾ ಪಿ. ಪಾಟೀಲ ಶುಕ್ರವಾರ ಪಟ್ಟಣದ ವಿವಿಧ ವಾರ್ಡಗಳಲ್ಲಿ ಮನೆ ಮನೆಗೆ ತೆರಳಿ‌ ಮತಯಾಚನೆ ನಡೆಸಿದರು.

ಪ್ರತಾಪಗೌಡ ಪಾಟೀಲ ಅವರಿಗೆ ಕೊವಿಡ್ ದೃಢಪಟ್ಟ ಕಾರಣ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರಿಂದ ಪ್ರತಾಪಗೌಡರ ಮೂವರು ಮಕ್ಕಳು, ಸೊಸೆಯರು, ಕುಟುಂಬದ ಸದಸ್ಯರು ಶುಕ್ರವಾರ ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ಪ್ರತಾಪಗೌಡ ಪಾಟೀಲ ಅವರಿಗೆ ಮತ ನೀಡಿ ಆರ್ಶೀವದಿಸಬೇಕು ಎಂದು ಮನವಿ ಮಾಡಿದರು.

‘ಉಪ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ನಮ್ಮ ಮಾವನವರಿಗೆ ಆರ್ಶೀವಾದ ಮಾಡಿ ಆಯ್ಕೆ ಮಾಡಲಿದ್ದಾರೆ ಎಂಬ ನೂರಕ್ಕೆ ನೂರರಷ್ಟು ವಿಶ್ವಾಸ‌ ಇದೆ‘ ಎಂದು ಪ್ರತಾಪಗೌಡ ಪಾಟೀಲ ಅವರ ಸೊಸೆ ವರ್ಷಾ ಪಾಟೀಲ ತಿಳಿಸಿದರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು