ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಕಾರ್ಮಿಕರ ಮಕ್ಕಳಿಗೂ ಉದ್ಯೋಗ ಒದಗಿಸಲು ಕ್ರಮ

ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್‌ ಹೇಳಿಕೆ
Last Updated 29 ಏಪ್ರಿಲ್ 2022, 13:18 IST
ಅಕ್ಷರ ಗಾತ್ರ

ಹಟ್ಟಿ ಚಿನ್ನದಗಣಿ: ಸ್ಧಳೀಯ ಗಣಿ ಅಭಿವೃದ್ದಿಗಾಗಿ ಶ್ರಮಿಸಿದ ಕಾರ್ಮಿಕ ಮಕ್ಕಳಿಗೂ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್‌ ಹೇಳಿದರು.

ಹಟ್ಟಿಚಿನ್ನದಗಣಿ ಕಂಪನಿ ಆಡಳಿತ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ, ಕಂಪೆನಿ ಭೂಮಿ ನೀಡಿದ ರೈತರಿಗೆ, ಭೂಸಂತ್ರಸ್ತರಿಗೆ ಅವಲಂಬಿತರಿಗೆ ನೇಮಕಾತಿ ಆದೇಶ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಣಿ ಅಭಿವೃದ್ದಿಗಾಗಿ 1,600 ಎಕರೆ ಜಮೀನು ವಶಪಡಿಸಿಕೊಳ್ಳಲಾಗಿದೆ. 398 ಜನರಿಗೆ ಉದ್ಯೋಗ ನೀಡಲಾಗಿದೆ, ಗಣಿ ಕಂಪನಿಗೆ ಶ್ರಮಿಸಿದ ಕಾರ್ಮಿಕರ ಕಾಲೋನಿಗಳ ರಸ್ತೆ, ಕುಡಿವ ನೀರು ಆರೋಗ್ಯ ಶಿಕ್ಷಣಕ್ಕೆ ಆದ್ಯತೆ ನೀಡಿ, ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಿಕೊಡಲಾಗುವುದು ಎಂದರು.

ಗಣಿ ಕಂಪೆನಿಯು ₹ 148 ಕೋಟಿ ಲಾಭದಾಯಕದಲ್ಲಿದ್ದು, ಲಾಭದ ಹಣದಿಂದ ಕಾರ್ಮಿಕರಿಗೆ ವಸತಿ, ರಸ್ತೆ, ಶೌಚಾಲಯ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗಣಿ ಕಂಪನಿಯಲ್ಲಿ ಸೋರಿಕೆ ಕಂಡು ಬಂದರೆ, ಅಂತಹ ಮಾಹಿತಿಯನ್ನು ಮೇಲಧಿಕಾರಿಗಳ ಗಮನಕ್ಕೆ ಕಾರ್ಮಿಕರು ತರಬೇಕಿದೆ ಎಂದು ಕಿವಿಮಾತು ಹೇಳಿದರು.

ಗಣಿ ಕಂಪನಿಯ ಅಧ್ಯಕ್ಷ ಮಾನಪ್ಪ ಡಿ. ವಜ್ಜಲ್ ಮಾತನಾಡಿದರು.

ಹಟ್ಟಿ ಚಿನ್ನದ ಗಣಿ ಆಸ್ಪತ್ರೆಯು 120 ಹಾಸಿಗೆಯ ಸಾಮರ್ಥ್ಯದ ಸೌಲಭ್ಯ ಹೊಂದಿದ್ದು, ಆಸ್ಪತ್ರೆಯಲ್ಲಿ ಕಂಪನಿಯ ನೌಕರರು ಹಾಗೂ ಅವಲಂಬಿತರಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಪ್ರತಿದಿನ ಸುಮಾರು 400-500 ಹೊರ ರೋಗಿಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಕಂಪನಿಯ ಆಸ್ಪತ್ರೆಯು ಸುಸಜ್ಜಿತವಾದಂತಹ ಮೈನರ್ ಹಾಗೂ ಮೇಜರ್ ಶಸ್ತ್ರ ಚಿಕಿತ್ಸೆ ಘಟಕ, ಡಿಜಿಟಲ್ ಎಕ್ಸರೇ, ಅಲ್ಯಾ ಸೋನೋಗ್ರಫಿ, ರಕ್ತ ಭಂಡಾರ, ಲ್ಯಾಬೋರೇಟರಿ, ಡಯಾಲಸೆಸ್ ಯುನಿಟ್, ಹಾಗೂ ಡೇ ಕೇರ್ ಸೆಂಟರ್ ಸೌಲಭ್ಯಗಳನ್ನು ಹೊಂದಿದೆ ಎಂದು ಗಣಿ ವ್ಯವಸ್ಥಾಪಕ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಸಚಿವರಿಗೆ ಮಾಹಿತಿ ನೀಡಿದರು.

ಹಟ್ಟಿ ಚಿನ್ನದ ಗಣಿ ಕಂಪನಿಯು ಸಂಪೂರ್ಣ ಅನುದಾನಿತ ಕೇಂದ್ರೀಯ ವಿದ್ಯಾಲಯವನ್ನು ಹೊಂದಿದೆ. ಈ ವಿದ್ಯಾಲಯವು 2015ರಿಂದ ಸೇವೆ ಸಲ್ಲಿಸುತ್ತಿದ್ದು, ಮುಖ್ಯವಾಗಿ ನೌಕರರ ಮತ್ತು ಇತರರ ಮಕ್ಕಳ ಶೈಕ್ಷಣಿಕ ಅಗತ್ಯವನ್ನು ಪೂರೈಸುತ್ತಿದ್ದು, ಪ್ರಸ್ತುತ ವಿದ್ಯಾಲಯವು 1 ನೇ ತರಗತಿಯಿಂದ 7ನೇ ತರಗತಿಯವರೆಗೆ ಎರಡು ವಿಭಾಗಗಳು ಹಾಗೂ 8ನೇ ತರಗತಿಯಿಂದ 10ನೇ ತರಗತಿಯವರೆಗೆ ಒಂದು ವಿಭಾಗವನ್ನು ಹೊಂದಿದ್ದು, ಒಟ್ಟು 788 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸಾಮರ್ಥ್ಯವನ್ನು ಹೊಂದಲಾಗಿದೆ ಎಂದು ಹೇಳಿದರು.

ಶಾಸಕರಾದ ಡಿ.ಎಸ್. ಹೂಲಗೇರಿ, ರಾಜಾ ವೆಂಕಟಪ್ಪ ನಾಯಕ, ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಾರ್ಯದರ್ಶಿ ಪಂಕಜ್ ಕುಮಾರ ಪಾಂಡೆ, ಉಪವಿಭಾಗಾಧಿಕಾರಿ ರಾಹುಲ್ ಸುಂಕನೂರು, ಕಂಪೆನಿ ವ್ಯವಸ್ಧಾಪಕ ನಿದೇರ್ಶಕ ಪ್ರಭುಲಿಂಗ ಕವಳಿಕಟ್ಟಿ, ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ ಬಹದ್ದೂರ್‌ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT