ಮಾನ್ವಿ: ‘ಪಟ್ಟಣದಲ್ಲಿ ಹಿರಿಯ ನಾಗರಿಕರಿಗಾಗಿ ಸಭಾಭವನ, ವಿಶ್ರಾಂತಿ ಭವನ, ವಾಚನಾಲಯ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವ ಎನ್.ಎಸ್.ಬೋಸರಾಜು ಭರವಸೆ ನೀಡಿದರು.

ಭಾನುವಾರ ಪಟ್ಟಣದ ನೀಲಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡನೇ ತಾಲ್ಲೂಕು ಮಟ್ಟದ ನಿವೃತ್ತ ಸರ್ಕಾರಿ ನೌಕರರ ಸಮಾವೇಶ ಹಾಗೂ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅಭಿವೃದ್ದಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ನಿವೃತ್ತ ನೌಕರರ ಅನುಭವ ಹಾಗೂ ಮಾರ್ಗದರ್ಶನ ಬಳಸಿಕೊಳ್ಳಲಾಗುವುದು' ಎಂದರು.

ಶಾಸಕ ಜಿ.ಹಂಪಯ್ಯನಾಯಕ ಮಾತನಾಡಿದರು.

ಮಹಾದೇವಪ್ಪ ಏಗನೂರು, ‘ನಿವೃತ್ತ ನೌಕರರ ಸಮಸ್ಯೆಗಳು ಹಾಗೂ ಪರಿಹಾರಗಳು’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ 70 ವರ್ಷ ಪೂರೈಸಿದ ಹಿರಿಯ ನಾಗರಿಕರು, ಭೂದಾನಿ ವಿ.ರವಿಬಾಬು ವಿವಿಧ ಕ್ಷೇತ್ರಗಳ ಸಾಧಕರಿಗೆ ಮತ್ತು ಪಟ್ಟಣದ ನೆರಳು ಹಿರಿಯ ನಾಗರಿಕರ ವೃದ್ದಾಶ್ರಮದ ಹಂಪಯ್ಯಸ್ವಾಮಿ, ಪಕ್ಷಿ ಪ್ರೇಮಿ ಸಲ್ಲಾವುದ್ದೀನ್, ಸಮಾಜ ಸೇವಕ ಹನುಮಂತಕೋಟೆ, ಯೋಗ ತರಬೇತುದಾರ ಮೌನೇಶ ಪೋತ್ನಾಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ತಾಲ್ಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರೇವಣಸಿದ್ದಯ್ಯ ಹಿರೇಮಠ, ಪ್ರಧಾನ ಕಾರ್ಯದರ್ಶಿ ಮಡಿವಾಳಯ್ಯ ನಂದಿಕೋಲಮಠ, ಉಪಾಧ್ಯಕ್ಷ ಕೆ.ವೀರಪ್ಪ, ಖಜಾಂಚಿ ಚಂದ್ರಶೇಖರಯ್ಯ ಗಡ್ಡಿಮಠ, ಇತರ ಪದಾಧಿಕಾರಿಗಳಾದ ಡಿ.ಜಿ.ಕರ್ಕಿಹಳ್ಳಿ, ಶ್ರೀಶೈಲಗೌಡ, ಮೂಕಪ್ಪ ಕಟ್ಟಿಮನಿ, ರಾಮಲಿಂಗಪ್ಪ, ಕುಬೇರಪ್ಪ, ಹುಸೇನಪ್ಪ, ಶಾಂತಪ್ಪ, ಪರಪ್ಪ ಬೆನಕನಾಳ್, ಚಂದಾ ಈರಣ್ಣ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.