ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಸ್ಕಿ: ಕೋತಿ ಕಚ್ಚಿ 5 ಜನರಿಗೆ ಗಾಯ

Published : 20 ಜೂನ್ 2021, 16:11 IST
ಫಾಲೋ ಮಾಡಿ
Comments

ಮಸ್ಕಿ (ರಾಯಚೂರು ಜಿಲ್ಲೆ): ಪಟ್ಟಣದ ವಿವಿಧೆಡೆ ಕೋತಿಯೊಂದು ಓಡಾಡಿಕೊಂಡು ಜನರನ್ನು ಗಾಬರಿಗೊಳಿಸಿದ್ದಲ್ಲದೆ, ಐದು ಜನರನ್ನು ಕಚ್ಚಿ ಗಾಯಗೊಳಿಸಿದ ಘಟನೆ ಭಾನುವಾರ ನಡೆದಿದೆ.
ತೇರು ಬೀದಿ‌ ರಸ್ತೆ ಮುಖಾಂತರ ತೆರಳುತ್ತಿದ್ದ ಇಬ್ಬರು ಬಾಲಕರು ಸೇರಿ ಜನರ ಕೈಗಳಿಗೆ ಮತ್ತು ಕಾಲುಗಳಿಗೆ ಪರಿಚಿದ್ದಲ್ಲದೆ, ಕಚ್ಚಿದೆ. ಗಾಯಗೊಂಡವರು ಖಾಸಗಿ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾರ್ವಜನಿಕರು ಸ್ಥಳೀಯ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ.
'ಅರಣ್ಯ ಇಲಾಖೆಗೆ ಈ ಕುರಿತು ವರದಿ ನೀಡಲಾಗಿದ್ದು ಕೋತಿಗಳನ್ನು ಹಿಡಿದು ಹೊರ ಸಾಗಿಸುವಂತೆ ಸೂಚಿಸಲಾಗಿದೆ' ಎಂದು ಪಿಎಸ್ ಐ ಸಿದ್ದರಾಮ ತಿಳಿಸಿದ್ದಾರೆ.
ಪಟ್ಟಣದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು ಜನ ಭಯಭೀತರಾಗಿದ್ದಾರೆ. ಕೂಡಲೇ ಕೋತಿಗಳನ್ನು ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು‌ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT