ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಹಾ ಕೊಲೆ | ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ: ತಂಜಿಮುಲ್‍ ಮುಸ್ಲಿಮೀನ್‍ ಕಮಿಟಿ

Published 23 ಏಪ್ರಿಲ್ 2024, 13:28 IST
Last Updated 23 ಏಪ್ರಿಲ್ 2024, 13:28 IST
ಅಕ್ಷರ ಗಾತ್ರ

ಲಿಂಗಸುಗೂರು: ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠರನ್ನು ಕೊಲೆ ಮಾಡಿರುವ ಆರೋಪಿ ಸೇರಿ ತುಮಕೂರು, ಬೆಂಗಳೂರಿನ ಯುವತಿಯರ ಕೊಲೆ ಪ್ರಕರಣದ ಆರೋಪಿಗಳನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ತಂಜಿಮುಲ್‍ ಮುಸ್ಲಿಮೀನ್‍ ಕಮಿಟಿ ಸದಸ್ಯರು ಒತ್ತಾಯಿಸಿದರು.

ವಕೀಲರ ಸಂಘದ ಅಧ್ಯಕ್ಷ ಭೂಪನಗೌಡ ಪಾಟೀಲ, ಉಪ ವಿಭಾಗಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದ ಅವರು,‘ಹುಬ್ಬಳ್ಳಿಯ ನೇಹಾ ಹಿರೇಮಠರನ್ನು ಕೊಲೆ ಮಾಡಿರುವ ಫಯಾಜ್‍, ತುಮಕೂರಿನ ರುಕ್ಸಾನರನ್ನು ಕೊಲೆ ಮಾಡಿ ಸುಟ್ಟು ಹಾಕಿರುವ ಪ್ರದೀಪ್‍, ಬೆಂಗಳೂರಿನ ವಿದ್ಯಾರ್ಥಿನಿ ಅನುಷಾ ಅವರನ್ನು ಕೊಲೆಗೈದ ಸುರೇಶ ಮತ್ತು ಅವರ ಸಂಗಡಿಗರಿಗೆ ಬಹಿರಂಗವಾಗಿ ಗಲ್ಲು ವಿಧಿಸಬೇಕು’ ಎಂದು ಆಗ್ರಹಿಸಿದರು.

ಕಮಿಟಿ ಅಧ‍್ಯಕ್ಷ ಖಾದರ್‌ ಪಾಷಾ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತರಸಾಬ್‌, ಮುಖಂಡರಾದ ಸೈಯದ್‍ ಯೂನುಸ್‍ ಮುಫ್ತಿ, ಗೌಸ್‍ ಸಾಬ್, ಫಾಹೀಮ್‍, ಸಲಾಮ್‍, ಅಬ್ದುಲ್‍ ಖಯೂನ್‍, ಎಕ್ಬಾಲ್‍ ಹವಾಲ್ದಾರ, ಖಾಜಾಹುಸೇನ್ ಫೋಲವಾಲೆ, ಜಿಲಾನಿಪಾಷಾ ಹಾಗೂ ಶಬ್ಬೀರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT