ಭಾನುವಾರ, ಮೇ 16, 2021
27 °C

ಸೋಂಕಿತರ ಸೇವೆಗಾಗಿ ಜೀವ– ಜೀವನ ಮುಡಿಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾನು ರಾಯಚೂರು ಜಿಲ್ಲೆಯ ಹಟ್ಟಿಯ ಚಿನ್ನಗಣಿ ನಾಡಿನಿಂದ ಬಂದವಳು. ಚಿಂಚೋಳಿಯ ತಾಲ್ಲೂಕು ಆಸ್ಪತ್ರೆಯಲ್ಲಿ ದಾದಿಯಾಗಿ ಸೇವೆ ಸೇರಿದ್ದೇನೆ. ಕಳೆದ ಬಾರಿ ಹಾಗೂ ಈ ವರ್ಷ ಕೊರೊನಾ ಸೋಂಕಿತರ ಸೇವೆಯಲ್ಲಿ ನಿರಂತರ ತೊಡಗಿದ್ದೇನೆ.

ನಾನು ಕೋವಿಡ್‌ ಸೋಂಕಿಗೆ ಎದೆಗುಂದದೇ ಕೆಲಸದಲ್ಲಿ ನಿರತವಾಗಿದ್ದೇನೆ. ಚಂದಾ‍ಪುರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಹಿರಿಯರಾದ ನನ್ನ ತಂದೆ ಕೂಡ ನನ್ನೊಂದಿಗೆ ಇದ್ದಾರೆ. ಆಸ್ಪತ್ರೆಯಲ್ಲಿ ಬರುವ ರೋಗಿಗಳನ್ನು ಆರೈಕೆ ಮಾಡುವ ಜತೆಗೆ, ನನಗೂ ಕೋವಿಡ್‌ ಅಂಟದಂತೆ, ವಯಸ್ಸಾದ ತಂದೆಯೂ ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ.

ವಿದ್ಯಾರ್ಥಿ ದೆಸೆಯಿಂದಲೂ ನಾನು ಸಮಾಜ ಸೇವೆಯ ಬಗ್ಗೆ ಆಸಕ್ತಿ ಹೊಂದಿದವಳು. ಈಗ ಆರೋಗ್ಯ ಇಲಾಖೆಯಲ್ಲಿ ಕೆಲಸ ಸಿಕ್ಕಿದ್ದು, ಇದಕ್ಕೆ ಇಂಬು ನೀಡಿದೆ. ಕೋವಿಡ್‌ನಂಥ ಸಂಕಷ್ಟದ ಸಮಯದಲ್ಲಿ ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇನೆ. ಈಗ ಯುದ್ಧಕಾಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಯುದ್ಧದವ ವೇಳೆ ಸೈನಿಕರಿಗೆ ನೀಡುವಂಥ ಬೆಂಬಲ, ಸಹಕಾರವನ್ನೇ ಜನರು ಈಗ ನಮಗೂ ನೀಡಬೇಕು. ಜನರು ಕೈ ಜೋಡಿಸಿದರೆ ಮಾತ್ರ ನಮ್ಮ ಸೇವೆಗೆ ಅರ್ಥ ಬರುತ್ತದೆ.‌

–ಸಯ್ಯದಾ ಗುಲ್ಜಾರ್, ಶುಶ್ರೂಷಕ ಅಧಿಕಾರಿ, ತಾಲ್ಲೂಕು ಆಸ್ಪತ್ರೆ, ಚಿಂಚೋಳಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು