ಸಿರವಾರ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ವೀರ ಮಹಿಳೆ ಒನಕೆ ಓಬವ್ವ ಜಯಂತಿ ಶನಿವಾರ ಆಚರಿಸಲಾಯಿತು.
ತಹಶೀಲ್ದಾರ್ ರವಿ ಎಸ್.ಅಂಗಡಿ ಒನಕೆ ಓಬವ್ವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
‘ಓಬವ್ವಳ ಸಾಹಸ, ದೇಶಪ್ರೇಮ ಇಂದಿನ ಮಹಿಳೆಯರಿಗೆ ಪ್ರೇರಣೆಯಾಗಿದ್ದು, ಮಹಿಳೆಯರು ಓಬವ್ವಳನ್ನು ಮಾದರಿಯಾಗಿ ಮಾಡಿಕೊಂಡು ಕೆಲಸ ಮಾಡಿದರೆ ಏನಾದರೂ ಸಾಧಿಸಬಹುದು’ ಎಂದರು.
ಶಿರಸ್ತೇದಾರ್ ಫಕ್ರುದ್ದೀನ್, ಕಂದಾಯ ನಿರೀಕ್ಷಕ ಶ್ರೀನಾಥ, ಎಫ್‌ಡಿಎ ವೀರೇಶ, ಅಮರ ಮತ್ತು ಕಚೇರಿ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.