ಶನಿವಾರ, ಫೆಬ್ರವರಿ 4, 2023
21 °C

ಪಂಚಮಸಾಲಿ ಮೀಸಲಾತಿಗೆ ಯಡಿಯೂರಪ್ಪ ವಿರೋಧ ಮಾಡುತ್ತಿದ್ದಾರೆ: ವಿಜಯಾನಂದ ಕಾಶಪ್ಪನವರ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರು (ರಾಯಚೂರು):  ‘ಪಂಚಮಸಾಲಿ 2(ಎ) ಮೀಸಲಾತಿ ಕಲ್ಪಿಸದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರೋಧಿಸುತ್ತಿದ್ದಾರೆ’ ಎಂದು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಿರುಪತಿಯಲ್ಲಿ ಒಳ ಒಪ್ಪಂದ ಮಾಡಿಕೊಂಡಿರುವ ವಿಷಯ ಗಮನಕ್ಕೆ ಬಂದಿದೆ ಎಂದರು. 

ತಿರುಪತಿಯಲ್ಲಿ ಆಗಿರುವ ಮಾತುಕತೆ ಸಂಬಂಧಿಸಿ ಶೀಘ್ರದಲ್ಲಿಯೆ ಅಧಿಕೃತ ಆಡಿಯೊ ಅಥವಾ ವಿಡಿಯೊ ಬಹಿರಂಗ ಪಡಿಸುತ್ತೇವೆ. ಡಿಸೆಂಬರ್ 12ರೊಳಗಡೆ ಮೀಸಲಾತಿ ಘೋಷಿಸದೆ ಹೋದಲ್ಲಿ ಯಡಿಯೂರಪ್ಪ ವಿರುದ್ದವೆ ರಾಜ್ಯವ್ಯಾಪಿ ಪ್ರತ್ಯೇಕ ಹೋರಾಟ ರೂಪಿಸಲಾಗುವುದು ಎಂದರು.

ತಾವು ಎರಡನೇ ಮದುವೆ ಆಗುತ್ತಿದ್ದೀರಿ ಎನ್ನುವ ಸುದ್ದಿ ಹರಿದಾಡುತ್ತಿದೆ ಎಂದು ಕೇಳಿದ ಪ್ರಶ್ನೆಗೆ, ‘ಇದು ಕಪೊಕಲ್ಪಿತ ವಿಷಯ. ವದಂತಿಗಳಿಗೆ ಕಿವಿಗೊಡದಿರಿ. ದಯವಿಟ್ಟು ವೈಯಕ್ತಿಕ ವಿಷಯಗಳ ಮೇಲೆ ಬೆಳಕು ಚೆಲ್ಲದಿರಿ’ ಎಂದು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು