ರಾಯಚೂರು: ಮೂರು ದಿನಗಳ ನಂತರ ಸೋಮವಾರ ಲಾಕ್‌ಡೌನ್ ಸಡಿಲಿಕೆ ಮಾಡಿದ್ದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ದಿನಸಿ ಮತ್ತು ತರಕಾರಿ ಖರೀದಿಗೆ ಅವಕಾಶ ಮಾಡಲಾಗಿದೆ. ಇದೇ ವೇಳೆ ಮದ್ಯದಂಗಡಿಗಳಿಗೂ ಅವಕಾಶ ನೀಡಿದ್ದುಖರೀದಿಗಾಗಿ ಮದ್ಯಪ್ರಿಯರು ಸರದಿ ನಿಂತಿದ್ದಾರೆ.
ರಾಯಚೂರು ನಗರದ ಗಂಜ್ ಸರ್ಕಲ್, ಸ್ಟೇಷನ್ ಸರ್ಕಲ್ ಹಾಗೂ ಗೋಶಾಲಾ ರಸ್ತೆಯಲ್ಲಿರುವ ಎಂಎಸ್‌ಪಿಎಲ್ ಎದುರು ಅತಿಹೆಚ್ಚಿನ ಸಂಖ್ಯೆಯಲ್ಲಿ ಮದ್ಯಪ್ರಿಯರು ನಿಂತಿದ್ದಾರೆ. ಬೆಳಿಗ್ಗೆ ಅಂಗಡಿ ಬಾಗಿಲು ತೆರೆಯುವ ಮೊದಲೇ ಸರದಿ ಆರಂಭವಾಗಿತ್ತು.
ಎಂಆರ್‌ಪಿ ದರದಲ್ಲಿ ಮದ್ಯ ಮಾರಾಟಮಾಡುವ ಸಿಎಲ್-2 ಅಂಗಡಿಗಳಿಗೂ ಪಾರ್ಸಲ್ ನೀಡುವುದಕ್ಕೆ ಅವಕಾಶ ನೀಡಲಾಗಿದೆ. ಅಲ್ಲಿಯೂ ಜನರು ಸರದಿ ನಿಂತು ಖರೀದಿಸುತ್ತಿದ್ದಾರೆ.