ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ ವಿಧಾನಸಭೆ ಕ್ಷೇತ್ರ: ಪ್ರತಾಪಗೌಡ ಪಾಟೀಲ ಒಟ್ಟು ಆಸ್ತಿ ₹6.28 ಕೋಟಿ

Last Updated 13 ಏಪ್ರಿಲ್ 2023, 15:57 IST
ಅಕ್ಷರ ಗಾತ್ರ

ರಾಯಚೂರು: ಮಸ್ಕಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರು ಚರ ಹಾಗೂ ಸ್ಥಿರ ಆಸ್ತಿ ಸೇರಿ ಒಟ್ಟು ₹6.28 ಕೋಟಿ ಒಡೆಯರಾಗಿದ್ದಾರೆ. ಪತ್ನಿ ಪದ್ಮಾವತಿ ಪ್ರತಾಪಗೌಡ ಒಟ್ಟು ₹1.92 ಕೋಟಿ ಹೊಂದಿದ್ದು, ₹1.02 ಕೋಟಿ ಸಾಲ ಪಡೆದಿದ್ದಾರೆ.

ಮಸ್ಕಿ ವಿಧಾನಸಭೆ ಚುನಾವಣಾಧಿಕಾರಿಗೆ ಗುರುವಾರ ಸಲ್ಲಿಸಿರುವ ಅಫಡವಿಟ್‌ನಲ್ಲಿ ಆಸ್ತಿ ವಿವರ ಸಲ್ಲಿಸಿದ್ದು, 2021 ರಲ್ಲಿ ನಡೆದ ಉಪಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ್ದ ಆಸ್ತಿ ವಿವರಕ್ಕೆ ಹೋಲಿಸಿದರೆ ಒಟ್ಟಾರೆ ₹36 ಲಕ್ಷ ಅಧಿಕ ಆಸ್ತಿ ಹೊಂದಿದ್ದಾರೆ.

2022–23ನೇ ಸಾಲಿನಲ್ಲಿ ತೆರಿಗೆ ಇಲಾಖೆಗೆ ಸಲ್ಲಿಸಿರುವ ರಿಟರ್ನ್ಸ್‌ನಲ್ಲಿ ₹36.21 ಲಕ್ಷ ಆದಾಯ ಘೋಷಿಸಿಕೊಂಡಿದ್ದಾರೆ. ನಗದು ₹1.95 ಲಕ್ಷ, ಪತ್ನಿಬಳಿ ₹1.25 ಲಕ್ಷ ಇದೆ. ವಿವಿಧ ಬ್ಯಾಂಕುಗಳಲ್ಲಿ ಇಟ್ಟಿರುವ ಠೇವಣಿಗಳು, ವಿಮೆ ಪಾಲಿಸಿಗಳು, ಹೂಡಿಕೆ, ಚಿನ್ನಾಭರಣಗಳು ಸೇರಿ ಒಟ್ಟು ಚರಾಸ್ತಿ ಮೌಲ್ಯ ₹1.84 ಕೋಟಿ ಇದ್ದು, ಪತ್ನಿಯು ₹66 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

ಪ್ರತಾಪಗೌಡ ಪಾಟೀಲ ಅವರು ಸ್ವಂತ 30 ಎಕರೆ 33 ಗುಂಟೆ ಜಮೀನು ಮತ್ತು ಪತ್ನಿ ಹೆಸರಿನಲ್ಲಿ 26 ಎಕರೆ ಜಮೀನು ಹೊಂದಿದ್ದಾರೆ. ಭೂಮಿ, ನಿವೇಶನಗಳು, ವಾಣಿಜ್ಯ ಕಟ್ಟಡಗಳು, ಮನೆ ಸೇರಿ ಒಟ್ಟು ₹4.48 ಕೋಟಿ ಮೊತ್ತದ ಸ್ಥಿರಾಸ್ತಿಯನ್ನು ಪ್ರತಾಪಗೌಡ ಹೊಂದಿದ್ದಾರೆ. ಅವರ ಪತ್ನಿಯದ್ದು ₹1.26 ಕೋಟಿ ಮೊತ್ತದ ಸ್ಥಿರಾಸ್ತಿ ಇದೆ ಎಂದು ಘೋಷಿಸಿದ್ದಾರೆ.

ವಿವಿಧ ಬ್ಯಾಂಕುಗಳಲ್ಲಿ ಪ್ರತಾಪಗೌಡ ಪಡೆದಿರುವ ಸಾಲ ₹36.73 ಲಕ್ಷ. ಆದರೆ ಪದ್ಮಾವತಿ ಅವರು ₹1.07 ಕೋಟಿ ಸಾಲ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT