ಶನಿವಾರ, ಡಿಸೆಂಬರ್ 3, 2022
21 °C
ಸಿಂಧನೂರು ತಲುಪಿದ ಸಂಕಲ್ಪ ಯಾತ್ರೆ; ಡಿ.19ರಂದು ಬೆಂಗಳೂರಿನಲ್ಲಿ ಪ್ರತಿಭಟನೆ

ಒಪಿಎಸ್‌ಗಾಗಿ ಸರ್ಕಾರಿ ನೌಕರರಿಂದ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಡಿಸೆಂಬರ್ 19ರಂದು ಎನ್‍ಪಿಎಸ್ ನೌಕರರ ಹೋರಾಟದ ಸಂಕಲ್ಪ ಯಾತ್ರೆ ಮಂಗಳವಾರ ಸಿಂಧನೂರು ತಲುಪಿತು.

ಕರ್ನಾಟಕ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘದ ತಾಲ್ಲೂಕು ಘಟಕದಿಂದ ಇಲ್ಲಿನ ಬಸವೇಶ್ವರ ವೃತ್ತ, ಗಾಂಧಿ ವೃತ್ತದ ಮೂಲಕ ನಗರಸಭೆ ಆವರಣದವರೆಗೆ ಬೃಹತ್ ಪಾದಯಾತ್ರೆ ನಡೆಸಲಾಯಿತು.

ನಂತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಾಂತಾರಾಮ ಮಾತನಾಡಿ, ದೇಶದ ಹಲವು ರಾಜ್ಯಗಳಲ್ಲಿ ಹಳೆ ಪಿಂಚನಿ ಯೋಜನೆ ಜಾರಿಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂಬಂಧ ರಾಜ್ಯದಲ್ಲೂ ಹೋರಾಟ ರೂಪಸಿದ್ದೇವೆ. ಬೆಂಗಳೂರಿನಲ್ಲಿ ನಡೆಯಲಿರುವ ಹೋರಾಟದಲ್ಲಿ ರಾಜ್ಯದ ಎನ್‍ಪಿಎಸ್ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ರಾಜ್ಯ ಘಟಕದ ಉಪಾಧ್ಯಕ್ಷ ಸಿದ್ದಪ್ಪ ಸಂಗಣ್ಣನವರ ಮಾತನಾಡಿ, ನಿಶ್ಚಿತ ಪಿಂಚಣಿ ಪಡೆಯುವುದು ಪ್ರತಿ ಸರಕಾರಿ ಎನ್‍ಪಿಎಸ್ ನೌಕರರ ಹಕ್ಕಾಗಿದೆ. ಹೋರಾಟದಲ್ಲಿ ಭಾಗವಹಿಸಿ ನಿಶ್ಚಿತ ಪಿಂಚಣಿಯನ್ನು ಪಡೆಯೋಣ ಗಟ್ಟಿಧ್ವನಿ ಸಂದೇಶವನ್ನು ಸರ್ಕಾರಕ್ಕೆ ರವಾನಿಸೋಣ ಎಂದು ಹೇಳಿದರು.

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ, ಉದ್ಯಮಿ ರಾಜೇಶ್ ಹಿರೇಮಠ ಪಾದಯಾತ್ರೆಗೆ ಬೆಂಬಲಿಸಿದ್ದರು. ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನಾಗನಗೌಡ, ಸಹಕಾರ್ಯದರ್ಶಿ ಮಹೇಶ ಹೊಸೂರು, ಸದಸ್ಯ ಚಂದ್ರಕಾಂತ ತಳವಾರ, ದಯಾನಂದ, ತಿಮ್ಮಯ್ಯ ಫುರ್ಲೆ, ಜಿಲ್ಲಾ ಸಂಚಾಲಕ ಶಂಕರ ದೇವರು ಹಿರೇಮಠ, ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ದುರುಗಪ್ಪ ಗುಡದೂರು, ಪಾದಯಾತ್ರೆ ಸಮಿತಿ ಸದಸ್ಯ ಮೋಹನ್ ರಾಮಕೃಷ್ಣ, ಫಕೀರಗೌಡ, ಪರಪ್ಪ, ಶಂಭುಲಿಂಗ ಚೆಲ್ಲ, ವೀರೇಶ ಸಾಸಲಮರಿ, ಬಸವರಾಜ ಜಾಡರ, ಪ್ರೌಢಶಾಲಾ ಸಂಘದ ಅಧ್ಯಕ್ಷ ಮಲ್ಲಪ್ಪ ಕೆ., ಜಿಪಿಟಿ ಸಂಘದ ಅಧ್ಯಕ್ಷ ಬಸವರಾಜ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೀರೇಶ ಸಾಸಲಮರಿ, ಅನುದಾನಿತ ಶಿಕ್ಷಕರ ಸಂಘದ ಅಧ್ಯಕ್ಷ ಹುಸೇನಪ್ಪ ಗೊರೇಬಾಳ, ಸರ್ಕಾರಿ ಉಪನ್ಯಾಸಕರ ಸಂಘದ ಅಧ್ಯಕ್ಷ ವಿರೂಪನಗೌಡ, ಎನ್‍ಪಿಎಸ್ ನೌಕರರ ಸಂಘದ ಗೌರವಾಧ್ಯಕ್ಷ ಡಾ.ನಾಗರಾಜ ಕಾಟ್ವಾ, ಸದಸ್ಯರಾದ ರಾಜೇಂದ್ರಕುಮಾರ, ಅಮರಯ್ಯ ಪಿಡಿಒ ಬಸವರಾಜ ಎನ್, ತಾ.ಪಂ. ಎಡಿ ಅಮರಗುಂಡಪ್ಪ ಸೇರಿದಂತೆ ಪ್ರಾಥಮಿಕ ಶಾಲಾ ಶಿಕ್ಷಕರು, ಕಂದಾಯ ಇಲಾಖೆ, ಆರೋಗ್ಯ ಇಲಾಖೆಯ, ಜೆಸ್ಕಾಂ ಇಲಾಖೆ, ಅನುದಾನಿತ ಶಾಲಾ, ತಾ.ಪಂ. ನೌಕರರು, ಉರ್ದು ಶಿಕ್ಷಕರು, ಮಸ್ಕಿ ತಾಲ್ಲೂಕು ನೌಕರರು ಸೇರಿದಂತೆ ವಿವಿಧ ಇಲಾಖೆ ಸುಮಾರು 600 ಜನ ಸರ್ಕಾರಿ ನೌಕರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು