ಭಾನುವಾರ, ಜನವರಿ 26, 2020
25 °C

‘ಧಾರ್ಮಿಕ ಕಟ್ಟುಪಾಡು ಜಯಿಸಿದ ತಾಯಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ದೇಶದಲ್ಲಿದ್ದ ಧಾರ್ಮಿಕ, ಶೈಕ್ಷಣಿಕ ಕಟ್ಟುಪಾಡುಗಳನ್ನು ಜಯಿಸಿದ ತಾಯಿ ಸಾವಿತ್ರಿಬಾಯಿ ಪುಲೆ ಅವರು ಮಹಿಳೆಯರಿಗೆ ಶಿಕ್ಷಣ ನೀಡಿದ್ದನ್ನು ಸದಾ ಸ್ಮರಿಸಬೇಕಿದೆ ಎಂದು ಅಕ್ಷಯ ರೂರಲ್ ಡವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ನರೇಂದ್ರಕುಮಾರ್‌ ಹೇಳಿದರು.

ತಾಲ್ಲೂಕಿನ ಬಾವಿದೊಡ್ಡಿ ಗ್ರಾಮದ ಸರ್ಕಾರಿ ಪ್ರೌಢಶಶಾಲೆಯಲ್ಲಿ ಅಕ್ಷಯ ರೂರಲ್ ಡವಲಪ್‌ಮೆಂಟ್ ಸೊಸೈಟಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ಸಾವಿತ್ರಿಬಾಯಿ ಪುಲೆ’ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಳೆಯೊಬ್ಬರು ಶಿಕ್ಷಕಿ ಆಗುವುದು ಸುಲಭದ ಮಾತಾಗಿರಲಿಲ್ಲ. ಅದರಲ್ಲೂ ಪುರುಷ ಪ್ರಧಾನ ಸಮಾಜದಲ್ಲಿ ಕಟು ಸಂಪ್ರದಾಯವಾದಿಗಳ ವಿರೋಧ ಕಟ್ಟಿಕೊಂಡು ಶಿಕ್ಷಣದ ಮೆಟ್ಟಿಲನ್ನು ಹತ್ತಿದ್ದು ದೊಡ್ಡ ಸಾಹಸವೇ ಸರಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಶಿಕ್ಷಕಿ ವಿಜಯಲಕ್ಷ್ಮಿ ಮಾತನಾಡಿ, ಮಹಿಳೆಯರು ಮತ್ತು ಶಿಕ್ಷಣದ ಬಗೆಗೆ ಸಾವಿತ್ರಿಬಾಯಿ ಪುಲೆ ಅವರು ತೋರಿದ ಕಾಳಜಿ ಹಾಗೂ ಅವರು ಮಾಡಿದ ಕಾರ್ಯ ಇಂದಿಗೂ ಪ್ರೆರಣಾದಾಯಿ ಎಂದು ತಿಳಿಸಿದರು.

ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ರವಿಕಿರಣ ನಿರೂಪಿಸಿದರು. ಸಂಸ್ಥೆಯ ನಿರ್ದೇಶಕ ಏಡು ಕೊಂಡಲ ರಾಜು, ತಿಮ್ಮನಗೌಡ್ರು, ಸುನಿಲಕುಮಾರ್, ಮಂಜುನಾಥ, ಕೃಷ್ಣಕುಮಾರ, ಮಂಜೇಶ, ಹರಿಪ್ರಸಾದ, ಮರ್ಲಿಂಗ ಪಾಟೀಲ ಹಾಗೂ ಶಾಲೆಯ ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು