ರಾಯಚೂರು: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವಕ್ಕೆ ನಗರದಲ್ಲಿ ಗುರುವಾರ ಅದ್ದೂರಿ ಚಾಲನೆ ದೊರೆಯಿತು. ಒಟ್ಟು ಐದು ವೇದಿಕೆಗಳಲ್ಲಿ ಕಲೆ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳು ಚಾಲನೆ ಪಡೆದುಕೊಂಡವು.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ರೀಡಾಂಗಣದ ಹಿಂಭಾಗದಲ್ಲಿ ನಿರ್ಮಿಸಲಾಗಿರುವ ಮುಖ್ಯವೇದಿಕೆ ಸಂಜೆಯಾಗುತ್ತಲೇ ಬಣ್ಣದ ಬೆಳಕಿನ ವಿದ್ಯುತ್ ದೀಪಗಳೊಂದಿಗೆ ಮೆರುಗು ಪಡೆದುಕೊಂಡಿತು.

ಪಂಡಿತ ನರಸಿಂಹಲು ವಡವಟ್ಟಿ ಅವರಿಂದ ಕ್ಲಾರಿನಿಯೊಟ್ ವಾದನ, ಶರಣಪ್ಪ ಗೋನಾಳ ಜಾನಪದ ಗೀತೆ, ವಿರೂಪಾಕ್ಷವಂದಲಿ, ಸುಗೂರೇಶ ಅಸ್ಕಿಹಾಳ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪ್ರಸ್ತುತ ಪಡಿಸಿದರು. ಒಟ್ಟು 10 ಪ್ರಮುಖ ಕಲಾವಿದರು ಕಾರ್ಯಕ್ರಮ ನೀಡಿ ಪ್ರೇಕ್ಷಕರ ಮನ ರಂಜಿಸಿದರು.

ವೇದಿಕೆ–2ರಲ್ಲಿ 40 ಕಲಾವಿದರು ವಚನ, ಸುಗಮ ಸಂಗೀತ, ಭಜನೆ, ಭಕ್ಷಿ ಸಂಗೀತ, ತತ್ವ ಪದ ಜಾನಪದ ಹಾಗೂ ಗಜಲ್ ಹಾಡಿದರು. ಭರತನಾಟ್ಯ, ಲಂಬಾಣಿನೃತ್ಯ ಹಾಗೂ ಸಮೂಹ ನೃತ್ಯ ಗಮನ ಸೆಳೆದವು. ವೇದಿಕೆ–3ರಲ್ಲಿ ಸಹ 48 ಕಲಾವಿದರು ಕಾರ್ಯಕ್ರಮ ನೀಡಿದರು.

ಸಿದ್ಧರಾಮ ಜಂಬಲದಿನ್ನಿ ಜಿಲ್ಲಾ ರಂಗ ಮಂದಿರದಲ್ಲಿ ನಾಟಕ, ರಂಗಭೂಮಿ, ಬಯಲಾಟ ಪ್ರದರ್ಶನ ನಡೆದು ಒಟ್ಟು 12 ಕಲಾ ತಂಡಗಳು ಪ್ರೇಕ್ಷಕರ ಮನ ರಂಜಿಸಿದರು. ಮಹಿಳಾ ಸಮಾಜದ ಆವರಣದಲ್ಲಿ ಮೊದಲ ದಿನ ಕವಿಗೋಷ್ಠಿ ನಡೆಯಿತು. 75 ಕವಿಗಳು ತಮ್ಮ ಕವನಗಳನ್ನು ವಾಚಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ ಉದ್ಘಾಟಿಸಿದರು. ಸಾಹಿತಿ ಗಿರಿರಾಜ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು.

ಗೊಂದಲಕ್ಕೀಡಾದ ಜನ: ಐದು ವೇದಿಕೆಗಳಲ್ಲಿ ಕಾರ್ಯಕ್ರಮ, ಕೃಷಿ ಮೇಳ, ಮತ್ಸ್ಯ ಮೇಳ, ಆಹಾರ ಮೇಳ, ವಿಶ್ವಕರ್ಮ ಮೇಳ, ಫಲಪುಷ್ಪ ಪ್ರದರ್ಶನ, ಚಿತ್ರಕಲಾ ಪ್ರದರ್ಶನ, ಮೆರವಣಿಗೆ, ಬೈಕ್ ರ್ಯಾಲಿ, ಹೆಲಿಕಾಪ್ಟರ್ ರೈಡಿಂಗ್, ಅಮೇಜಿಂಗ್ ಪಾರ್ಕ್ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಏಕಕಾಲಕ್ಕೆ ಆರಂಭವಾದ ಕಾರಣ ಸಾರ್ವಜನಿಕರು ಯಾವ ಕಾರ್ಯಕ್ರಮಕ್ಕೆ ಹೋಗಬೇಕು ಎನ್ನುವ ಗೊಂದಲಕ್ಕೆ ಬಿದ್ದರು.

ಜಿಲ್ಲಾ ರಂಗ ಮಂದಿರ, ಮಹಿಳಾ ಸಮಾಜ ಹಾಗೂ ವಿಶ್ವವಿದ್ಯಾಲಯದ ಬಸವೇಶ್ವರ ಸಭಾಂಗಣದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿದ್ದ ಪ್ರೇಕ್ಷಕರ ಕೊರತೆ ಕಂಡು ಬಂದಿತು.

ಕೃಷಿ ಮೇಳ, ಆಹಾರ ಮೇಳದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಬಂದಿದ್ದರು. ಸಂಜೆ ವೇಳೆಗೆ ಅಪಾರ ಸಂಖ್ಯೆಯಲ್ಲಿ ಜನ ಹರಿದು ಬಂದರು. ಜನರನ್ನು ನಿಯಂತ್ರಿಸುವುದು ಕಷ್ಟವಾಯಿತು. ರಾಯಚೂರು ಉತ್ಸವದ ಪ್ರಧಾನ ವೇದಿಕೆಗೆ ಬರಲು ನಾಲ್ಕು ಕಡೆ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿತ್ತು. ಮುಖ್ಯ ದ್ವಾರದಲ್ಲಿ ಸಾರ್ವಜನಿಕರು ಸುಲಭವಾಗಿ ಬಂದು ಹೋಗಲು ವ್ಯವಸ್ಥೆ ಮಾಡಲಾಗಿತ್ತು.

ಗಣ್ಯರು, ಕಲಾವಿದರು, ಪತ್ರಕರ್ತರಿಗೆ ಪ್ರತ್ಯೇಕ ಮಾರ್ಗದ ವ್ಯವಸ್ಥೆ ಮಾಡಲಾಗಿತ್ತು. ವಾಹನಗಳ ನಿಲುಗಡೆಗೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ರಸ್ತೆ ಬದಿಗೆ ನಿಲ್ಲಿಸಿದ ದ್ವಿಚಕ್ರವಾಹನಗಳನ್ನು ಸಂಚಾರ ಠಾಣೆಯ ಪೊಲೀಸರು ಟೋಯ್ ವಾಹನದ ಮೂಲಕ ಹೊತ್ತೊಯ್ದು ವಾಹನ ಚಾಲಕರಿಗೆ ಬಿಸಿ ಮುಟ್ಟಿಸಿದರು.

ಫಲಪುಷ್ಟ ಪ್ರದರ್ಶನ: ಕಣ್ಮನ ಸೆಳೆದ ಹಟ್ಟಿ ಚಿನ್ನದ ಗಣಿ

- ಬಸವರಾಜ ಬೋಗಾವತಿ

ರಾಯಚೂರು: ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಜಿಲ್ಲಾ ಉತ್ಸವದ ಪ್ರಯುಕ್ತ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಹೂವುಗಳಿಂದ ಮಾಡಿದ ಹಟ್ಟಿ ಚಿನ್ನದ ಗಣಿ, ರಾಯಚೂರು ಕೋಟೆ, ವಿಮಾನನೌಕೆ ಆಕರ್ಷಣೆಯಾಗಿದ್ದವು. ಜಿಲ್ಲಾ ಉತ್ಸವ ಪ್ರಯುಕ್ತ ಮೂರು ದಿನಗಳ ಕಾಲ ನಡೆಯುವ ಫಲ ಪುಷ್ಪ ಪ್ರದರ್ಶನದಲ್ಲಿ ಚೆಂಡು ಹೂ, ಬಿಳಿ ಸೇವಂತಿಗೆ ಮತ್ತು ಸೇವಂತಿಗೆ ಹೂಗಳಿಂದ ದೇಶದ ಏಕೈಕ ಚಿನ್ನದ ಗಣಿಯಾಗಿರುವ ಹಟ್ಟಿ ಚಿನ್ನದ ಗಣಿಯ ಮಲ್ಲಪ್ಪ ಶಾಫ್ಟ್, ವಿವಿಧ ಹೂಗಳಿಂದ ರಾಯಚೂರು ನಗರದ ಕೋಟೆ, ಚೆಂಡು ಹೂ ಹಾಗೂ ಸೇವಂತಿಗೆ ಹೂಗಳಿಂದ ಮಾಡಿದ ಐಎನ್ಎನ್ ವಿಕ್ರಾಂತ ವಿಮಾನ ನೌಕೆ ಪ್ರಮುಖ ಆಕರ್ಷಣೆಯಾಗಿದ್ದವು. ಸಾವಿರಾರು ಜನರು ಬಂದು ಈ ವಿಸ್ಮಯ ಕಣ್ತುಂಬಿಕೊಂಡರು. ತರಕಾರಿ ಬೆಳೆ, ಹಣ್ಣುಗಳ ಬೆಳೆಯ ಪ್ರಾತ್ಯಕ್ಷಿಕೆ, ಕಲ್ಲಂಗಡಿ ಹಣ್ಣುಗಳಲ್ಲಿ ಕೆತ್ತಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಸಾಹಿತಿಗಳ ರೂಪಗಳು, ಅರಳಿ ಮರದ ಎಲೆಗಳಲ್ಲಿ ಖ್ಯಾತ ವ್ಯಕ್ತಿಗಳ ಕಾಲಾಕೃತಿಗಳು, ನಾನಾ ಬಣ್ಣದ ಬಗೆ ಬಗೆ ಹೂಗಳ ಅಲಂಕಾರ, 30ಕ್ಕೂ ಹೆಚ್ಚು ಜಾತಿಗಳ ಸಾವಿರಾರು ಸಂಖ್ಯೆಯಲ್ಲಿ ಹೂ ಕುಂಡಗಳು ಇಲ್ಲಿನ ವಿಶೇಷತೆಯಾಗಿದೆ. ಫಲಪುಷ್ಟ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.