ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್: ‘ಹಲೀಮ್’ಗೆ ಹೆಚ್ಚಿದ ಬೇಡಿಕೆ

ಮಾನ್ವಿಯಲ್ಲಿ ವಿವಿಧ ವ್ಯಾಪಾರ ಮಳಿಗೆಗಳು ಆರಂಭ
Last Updated 2 ಏಪ್ರಿಲ್ 2023, 6:43 IST
ಅಕ್ಷರ ಗಾತ್ರ

ಮಾನ್ವಿ: ಮುಸ್ಲಿರ ಪವಿತ್ರ ರಂಜಾನ್ ಮಾಸಾಚರಣೆ ಆರಂಭವಾಗುತ್ತಿದ್ದಂತೆ ಪಟ್ಟಣದ ವಿವಿಧೆಡೆ ಹೈದರಾಬಾದ್‌ ಹಲೀಮ್ ಸೇರಿದಂತೆ ಇತರ ಖಾದ್ಯಗಳು, ಹಣ್ಣು–ಹಂಪಲು ಮಾರಾಟದ ಮಳಿಗೆಗಳನ್ನು ತೆರೆಯಲಾಗಿದೆ.

ವಿಶೇಷವಾಗಿ ರಂಜಾನ್ ತಿಂಗಳಲ್ಲಿ ಮಾತ್ರ ತಯಾರಿಸಿ ಮಾರಾಟ ಮಾಡುವ ಹಲೀಮ್ ಬಹುತೇಕ ಜನರ ಇಷ್ಟದ ಖಾದ್ಯವಾಗಿದೆ. ಗೋಧಿ, ಚಿಕನ್, ಮಟನ್ ಮತ್ತಿತರ ಆಹಾರ ಪದಾರ್ಥಗಳಿಂದ ತಯಾರಿಸಲಾಗುವ ಹಲೀಮ್ ರುಚಿಯ ಜತೆಗೆ ಉತ್ತಮ ಪೌಷ್ಟಿಕ ಆಹಾರ ಎಂದು ಪರಿಗಣಿಸಲ್ಪಟ್ಟಿದೆ.

ಕಾರಣ ಪಟ್ಣಣದ ಚಾವುಷ್ ಹೋಟೆಲ್, ಪ್ರವಾಸಿ ಮಂದಿರ ಹಾಗೂ ಕರ್ನಾಟಕ ಫಂಕ್ಷನ್ ಹಾಲ್ ಹತ್ತಿರ ಸೇರಿದಂತೆ ಇತರ ಕೆಲವು ಕಡೆ ಹಲೀಮ್ ಮಾರಾಟ ಮಾಡಲಾಗುತ್ತಿದೆ. ಪ್ರತಿದಿನ ಸಂಜೆ ಇಫ್ತಾರ್‌ ಸಮಯದಲ್ಲಿ ಹಲೀಮ್ ಮಾರಾಟ ಮಾಡುವ ಹೋಟೆಲ್ ಹಾಗೂ ವ್ಯಾಪಾರಿ ಮಳಿಗೆಗಳಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಹಕರು ಕಂಡು ಬರುತ್ತಿರುವುದು ಸಾಮಾನ್ಯವಾಗಿದೆ.

ತಲಾ ₹ 80ರ ದರದಲ್ಲಿ ಹಲೀಮ್ ಹೊಂದಿರುವ ಚಿಕ್ಕ ಪೊಟ್ಟಣಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ವರ್ಷ ಹಲೀಮ್ ಮಾರಾಟ
ಮಾಡುವ ಹೋಟೆಲ್‌ ಹಾಗೂ ತಾತ್ಕಾಲಿಕ ವ್ಯಾಪಾರಿ ಮಳಿಗೆಗಳಲ್ಲಿ ವ್ಯಾಪಾರದ ಪ್ರಮಾಣ
ಹೆಚ್ಚಾಗಿರುವುದು ಮಾಲೀಕರಲ್ಲಿ ಹರ್ಷ ಮೂಡಿಸಿದೆ.

ಹಲೀಮ್ ತಯಾರಿಕೆಗೆ ಬಳಸುವ ಪದಾರ್ಥಗಳು: ಮಾಂಸದ ಜತೆಗೆ ಪುಡಿಮಾಡಿದ ಗೋಧಿ, ತುಪ್ಪ (ಬೆಣ್ಣೆಯಿಂದ ಹಾಲಿನ ಕೊಬ್ಬು, ಇದನ್ನು ಸೃಷ್ಟೀಕರಿಸಿದ ಬೆಣ್ಣೆ ಎಂದೂ ಕರೆಯುತ್ತಾರೆ), ಹಾಲು, ಮೊಸರು, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಅರಿಶಿಣ, ಕೆಂಪು ಮೆಣಸಿನಕಾಯಿ ಮಸಾಲೆಗಳಾದ ಜೀರಿಗೆ (ಶಾಹ್ ಜೀರಾ), ಸಾಸಿವೆ, ದಾಲ್ಚಿನ್ನಿ, ಏಲಕ್ಕಿ, ಲವಂಗ, ಕರಿಮೆಣಸು, ಕೇಸರಿ, ಬೆಲ್ಲ, ನೈಸರ್ಗಿಕ ಗಮ್, ಮಸಾಲೆ (ಕಬಾಬ್ ಚೀನಿ); ಮತ್ತು ಒಣ ಹಣ್ಣುಗಳಾದ ಪಿಸ್ತಾ, ಗೋಡಂಬಿ, ಅಂಜೂರ ಮತ್ತು ಬಾದಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT