ಭಾನುವಾರ, ಜೂಲೈ 5, 2020
23 °C

ಆರ್ಚಕರಿಗೆ ಆರ್ಥಿಕ ನೆರವು ನೀಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ದೇವಸ್ಥಾನಗಳು ಬಂದ್ ಆಗಿರುವ ಕಾರಣ ಆರ್ಚಕರಿಗೆ ಆರ್ಥಿಕ ಸಮಸ್ಯೆ ಎದುರಾಗಿದ್ದು ಸರ್ಕಾರ ಆರ್ಥಿಕ ಸೌಲಭ್ಯ ನೀಡಬೇಕು ಎಂದು ಜಿಲ್ಲೆಯ ವಿವಿಧ ದೇವಸ್ಥಾನದ ಅರ್ಚಕರು ಜಿಲ್ಲಾಡಳಿತ ಸಿಬ್ಬಂದಿಗೆ ಗುರುವಾರ ಮನವಿ ಸಲ್ಲಿಸಿದರು.

ದೇವಸ್ಥಾನದಲ್ಲಿ ಸೇವೆ ಮಾಡುವ ನಮಗೆ ಲಾಕ್ ಡೌನ್ ನಿಂದಾಗಿ ದಿನ ನಿತ್ಯದ ಜೀವನ ನಡೆಸಲು ತೀವ್ರ ತೊಂದರೆಯಾಗಿದೆ. ಬೇರೆ ಆದಾಯ ಮೂಲವಿಲ್ಲದ ನಮಗೆ ಸರ್ಕಾರದಿಂದ ನೀಡುವ ಆರ್ಥಿಕ ಸೌಲಭ್ಯಗಳನ್ನು ನೀಡಿ ಸಂಕಷ್ಟದ ಕಾಲಕ್ಕೆ ನೆರವು ನೀಡಬೇಕು ಎಂದು ಶೀಲಾ ಕುಮಾರ ಶಾಸ್ತ್ರೀ, ದತ್ತ ದಿಗಂಬರ ಜೋಶಿ, ನಾರಾಯಣ ಭಟ್ಟ ಜೋಶಿ, ಸುಹಾಸ್, ಗೋಪಾಲ ಜೋಶಿ, ವಸಂತ ಭಟ್ ಮತ್ತಿತರರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು