ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಟ್ಟಿಚಿನ್ನದಗಣಿ | ರಸ್ತೆ ಅಪಘಾತ: ಬೈಕ್ ಸವಾರ ಸಾವು

Published 23 ಫೆಬ್ರುವರಿ 2024, 15:21 IST
Last Updated 23 ಫೆಬ್ರುವರಿ 2024, 15:21 IST
ಅಕ್ಷರ ಗಾತ್ರ

ಹಟ್ಟಿಚಿನ್ನದಗಣಿ: ಹಟ್ಟಿ-ಹೊಸೂರು ಕ್ರಾಸ್ ಬಳಿ ಆಟೊ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಧಳದಲ್ಲೆ ಮೃತಪಟ್ಟ ಘಟನೆ ಗುರುವಾರ ಜರುಗಿದೆ.

ಬೈಕ್ ಸವಾರ, ಗೌಡೂರು ಗ್ರಾಮದ ನಿವಾಸಿ ಶಿವರಾಜ(30) ಮೃತರು. ಅಪಘಾತದಲ್ಲಿ ಆಟೊದಲ್ಲಿದ್ದ ಆದಪ್ಪ ಹಾಗೂ ಬೈಕ್‌ ಮೇಲಿದ್ದ ದೇವರಾಜ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶಿವರಾಜ ಉಮಾದೇಶವಿ ಹಾಗೂ ದೇವರಾಜ ಅವರು ಗೌಡೂರು ಗ್ರಾಮದಿಂದ ಸಿರವಾರ ಮಾರ್ಗದಲ್ಲಿ ಬೈಕ್ ಮೇಲೆ ಹೊರಟಿದ್ದರು. ಈ ವೇಳೆ ಹಟ್ಟಿ–ಹೊಸೂರು ಕ್ರಾಸ್ ಬಳಿ ಬೈಕ್ ಹಾಗೂ ಆಟೊ ಮುಖಾಮುಖಿ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT