ಶನಿವಾರ, ಮಾರ್ಚ್ 6, 2021
28 °C

ಗೋಲಪಲ್ಲಿ ಬಳಿ ಮತ್ತೊಂದು ಅಪಘಾತ: ಬಿಜೆಪಿ ಮುಖಂಡ ಅಪಾಯದಿಂದ ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಹಟ್ಟಿ ಚಿನ್ನದಗಣಿ: ಜಿಲ್ಲೆಯ ಅಪಘಾತ ವಲಯವಾಗಿರುವ ಲಿಂಗಸುಗೂರು ತಾಲ್ಲೂಕಿನ ಗೋಲಪಲ್ಲಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಅಪಘಾತ ಘಟನೆ ಶುಕ್ರವಾರವೇ ನಡೆದಿದ್ದು, ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ಅಮರನಾಥ ಪಾಟೀಲ ಅವರು ಅಪಾಯದಿಂದ ಪಾರಾಗಿದ್ದಾರೆ.

ಮಸ್ಕಿಯಲ್ಲಿ ಆಯೋಜಿಸಿದ್ದ ಬಿಜೆಪಿ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಕಲಬುರ್ಗಿಯಿಂದ ಸಂಚರಿಸುತ್ತಿದ್ದ ಅಮರನಾಥ ಪಾಟೀಲ ಅವರಿದ್ದ ಇನ್ನೊವಾ ಕಾರು, ಟಿಪ್ಪರ್‌ ಡಿಕ್ಕಿ ಆಗುವುದನ್ನು ತಪ್ಪಿಸುವಾಗ ಮೂರು ಸುತ್ತು ಮಗುಚಿದೆ.

ಅದೃಷ್ಟವಶಾತ್‌ ಯಾವುದೇ ಗಾಯಗಳಾಗಿಲ್ಲ. ಆನಂತರ ಬೇರೆ ಕಾರಿನಲ್ಲಿ ಅವರು ಸಂಚರಿಸಿ ಮಸ್ಕಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಹಟ್ಟಿ ಪೊಲೀಸ್‌ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಎರಡು ಲಾರಿಗಳ ಮಧ್ಯೆ ಕಾರೊಂದು ನಜ್ಜುಗುಜ್ಜಾಗಿ ಇಬ್ಬರು ಸಾವನ್ನಪ್ಪಿದ ಘಟನೆ ಕೂಡಾ ಶುಕ್ರವಾರ ಬೆಳಿಗ್ಗೆ ಅದೇ ಸ್ಥಳದಲ್ಲಿ ನಡೆದಿತ್ತು.

ಇದನ್ನೂ ಓದಿ: 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು