ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ₹15 ಕೋಟಿ‌’

Last Updated 28 ಜೂನ್ 2022, 12:21 IST
ಅಕ್ಷರ ಗಾತ್ರ

ಮಸ್ಕಿ: ‘ರಾಜ್ಯ ಸರ್ಕಾರ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಅದಕ್ಕೆ ₹15 ಕೋಟಿ‌ ಬಿಡುಗಡೆ ಮಾಡಿದೆ’ ಎಂದು ವಿಶ್ವಕರ್ಮ ಸಮಾಜದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮೌನೇಶ ಜಾಲವಾಡಗಿ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಮೊದಲ ಬಾರಿಗೆ ವಿಧಾನಸೌಧದ ಮೂರನೇಯ ಮಹಡಿಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ ಮಾಡುವ ಮೂಲಕ ಐತಿಹಾಸಿಕ ನಿರ್ಣಯ ಕೈಗೊಂಡಿದ್ದಾರೆ. ಇಡೀ ವಿಶ್ವಕರ್ಮ ಸಮಾಜ ಅವರನ್ನು ಅಭಿನಂದಿಸುತ್ತದೆ’ ಎಂದರು.

ವಿಶ್ವಕರ್ಮ ಸಮಾಜದ ಸ್ವಾಮೀಜಿಗಳು ಹಾಗೂ ನಿಗಮದ ಅಧ್ಯಕ್ಷ ಬಾಬು‌ ಪತ್ತಾರ ಸೇರಿ ಅನೇಕ ಮುಖಂಡರ ಶ್ರಮದಿಂದ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದೆ ಎಂದರು.

ಸಮಾಜದಲ್ಲಿಯ ಚಿಕ್ಕಪುಟ್ಟ ಗೊಂದಲಗಳನ್ನು‌‌ ನಿವಾರಿಸಿಕೊಂಡು ಸಮಾಜದ ಸಂಘಟನೆ ಬಲ‌ಪಡಿಸಲಾಗುವುದು ಎಂದು ಹೇಳಿದರು.

ಮೌನೇಶ್ವರ ದೇವಸ್ಥಾನದ ಧರ್ಮಾಧಿಕಾರಿ ಮೌನೇಶ ತಾತ, ಮುಖಂಡ ಜನಾರ್ಧನ ಪತ್ತಾರ, ದೇವರಾಜ ಕುಂಬಾರ, ಮಲ್ಲಿಕಾರ್ಜುನ ‌ಹಸಮಕಲ್,‌ ವೆಂಕಣ್ಣ ಪತ್ತಾರ, ಶಶೀಧರ ಬಡಿಗೇರ, ಗಟ್ಟೆಪ್ಪ ಬಡಿಗೇರ, ಬಸವಂತಪ್ಪ, ಅಮರೇಶ ಪತ್ತಾರ, ಅಯ್ಯಪ್ಪ ಪತ್ತಾರ ಹಾಗೂ ಚಿದಾನಂದಪ್ಪ ಪತ್ತಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT