ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೂದಿ ನೀರು ನದಿಗೆ ಬಿಡದಂತೆ ಎಚ್ಚರವಹಿಸಿ

ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ ಸೂಚನೆ
Last Updated 12 ಮಾರ್ಚ್ 2020, 12:28 IST
ಅಕ್ಷರ ಗಾತ್ರ

ಶಕ್ತಿನಗರ: ಹಾರುಬೂದಿ ನೀರು ಕೃಷ್ಣಾನದಿಗೆ ಬಿಡದಂತೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ ಅವರು ಗುರುವಾರ

ಇಲ್ಲಿನ ಹಾರುಬೂದಿ ಹೊಂಡಕ್ಕೆ ಗುರುವಾರ ಭೇಟಿ ನೀಡಿದ ಅವರು, ಬೂದಿ ಸಾಗಣೆ ಮಾಡುವ ವಾಹನಗಳ ಸ್ಥಳವನ್ನು ಪರಿಶೀಲಿಸಿ, ಅಧಿಕಾರಿಗಳಿಗೆ ಸೂಚಿಸಿದರು.

ಬೂದಿ ನೀರು ನದಿಗೆ ಬಿಡದಂತೆ, ಸೂಕ್ತ ಪರ್ಯಾಯದ ವ್ಯವಸ್ಥೆ ಕೈಗೊಂಡು ಜನ– ಜಾನುವಾರುಗಳಿಗೆ ನೀರು ಕುಡಿಯುವುದಕ್ಕೆ ಅನುಕೂಲ ಮಾಡಿಕೊಡಬೇಕು. ಅಲ್ಲದೆ, ಜನರು ವಾಸಿಸುವ ಮಾರ್ಗದ ರಸ್ತೆಯಲ್ಲಿ ಬೂದಿ ಒಯ್ಯುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗಲಿದೆ. ಹಾರುಬೂದಿ ಹೊಂಡದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಿಸಬೇಕು. ಬೂದಿ ಹೊಂಡದ ಮೇಲೆ ವಾಹನಗಳನ್ನು ಸ್ವಚ್ಛತೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

150 ವಾಹನಗಳ ಮೂಲಕ ಬೂದಿ ಸಾಗಣೆಗೆ, ಇಳಕಲ್ ಏಜೆನ್ಸಿದವರಿಗೆ ಒಬ್ಬರಿಗೆ ನೀಡಿದ್ದರಿಂದ ಸ್ಥಳೀಯರಿಗೆ ತೊಂದರೆ ಆಗಿದೆ. ಶಕ್ತಿನಗರದಲ್ಲಿ ಒಟ್ಟು 485 ಏಜೆನ್ಸಿಗಳಿವೆ. ಅದರಲ್ಲಿ 300 ವಾಹನಗಳಿಂದ ಬೂದಿ ಸಾಗಣೆ ಮಾಡಬೇಕು. ಒಂದು ಏಜೆನ್ಸಿಗೆ, ಕನಿಷ್ಠ ಒಂದು ವಾಹನದ ಬೂದಿ ಸಾಗಣೆ ಸಿಗುತ್ತಿಲ್ಲ. ಹೀಗಾಗಿ, ಬೂದಿ ಸಾಗಣೆ ಮಾಡಲು, ಸ್ಥಳೀಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಬೂದಿ ಸಾಗಣೆಯ ಏಜೆನ್ಸಿ ಮಾಲೀಕ ಶಂಕರಪಾಟೀಲ್ ಒತ್ತಾಯಿಸಿದರು.

ಬೂದಿ ಹೊಂಡದಿಂದ 300 ಮೀಟರ್ ಅಂತರದಲ್ಲಿ ಪ್ರತ್ಯೇಕವಾಗಿ ಕೃಷ್ಣಾನದಿ ಹತ್ತಿರ ಸ್ವಂತ ಹಣದಲ್ಲಿ ರಸ್ತೆ ನಿರ್ಮಿಸಿಕೊಂಡರೆ, ನಿಮಗೆ 600 ವಾಹನಗಳಿಂದ ಬೂದಿ ಸಾಗಣೆ ಮಾಡಲು ಅನುಕೂಲ ಮಾಡಿಕೊಡಲಾಗುವುದು. ಅಲ್ಲಿಂದ ಬೂದಿ ವಾಹನಗಳನ್ನು ಒಯ್ಯುಬೇಕು ಎಂದರು.

ಹೆಚ್ಚಿನ ಬಂಡವಾಳ ಹಾಕಿ ಇಳಕಲ್ ಏಜೆನ್ಸಿದವರು, 150 ವಾಹನಗಳ ಮೂಲಕ ಬೂದಿ ಸಾಗಣೆ ಮಾಡುತ್ತಿದ್ದಾರೆ. ಅದರಂತೆ ನೀವು ಕೂಡ, ಹೆಚ್ಚಿನ ಬಂಡವಾಳ ಹಾಕಿ, ವಾಹನಗಳ ಸಾಗಣೆ ಮಾಡಿ ಎಂದು ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ ಅವರು, ಸ್ಥಳೀಯ ಏಜೆನ್ಸಿ ಮಾಲೀಕರಿಗೆ ತಿಳಿಸಿದರು.

ಇದೇ ವೇಳೆ ಪೊನ್ನುರಾಜ ಅವರು, ಆರ್‌ಟಿಪಿಎಸ್, ವೈಟಿಪಿಎಸ್ ವಿದ್ಯುತ್ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಅಧಿಕಾರಿಗಳಿಂದ ಕಲ್ಲಿದ್ದಲು ವಿಭಾಗ ಸೇರಿದಂತೆ ವಿವಿಧ ವಿಭಾಗದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಕರ್ನಾಟಕ ವಿದ್ಯುತ್ ನಿಗಮದ ಮಾನವ ಸಂಪನ್ಮೂಲ ನಿರ್ದೇಶಕ ದೊರೆಬಾಗೇಶ್ವರ ನಾಯಕ, ಆರ್‌ಟಿಪಿಎಸ್‌ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಸಿ.ವೇಣುಗೋಪಾಲ, ಚಾಲನೆ ಮತ್ತು ನಿರ್ವಹಣೆ ವಿಭಾಗದ ಮುಖ್ಯ ಎಂಜಿನಿಯರ್ ವೆಂಕಟಚಲಾಪತಿ, ಸಿವಿಲ್ ವಿಭಾಗದ ಮುಖ್ಯ ಎಂಜಿನಿಯರ್ ರಾಜುಮುಡಿ, ಕಲ್ಲಿದ್ದಲು ವಿಭಾಗದ ಮುಖ್ಯ ಎಂಜಿನಿಯರ್ ಸುರೇಶಬಾಬು ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT