ಮಂಗಳವಾರ, ಡಿಸೆಂಬರ್ 1, 2020
21 °C

‘ದೇಶಕ್ಕೆ ರಷ್ಯ ಕ್ರಾಂತಿ ಸ್ಪೂರ್ತಿದಾಯಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಮಾನವನಿಂದ ಮಾನವನ ಶೋಷಣೆಗೆ ಕೊನೆಹಾಡಿದ ರಷ್ಯಾ ಕ್ರಾಂತಿಯೂ ಕಾರ್ಮಿಕ ವರ್ಗದ ಇತಿಹಾಸದಲ್ಲಿ ಮಹತ್ವದ ಘಟನೆಯಾಗಿದೆ. ಅತ್ಯಂತ ಹಿಂದುಳಿದ ದೇಶದಲ್ಲಿ ಕ್ರಾಂತಿಗೆ ಕಾರಣರಾದ ಲೆನಿನ್ ಚಿಂತನೆಗಳು ಸ್ಪೂರ್ತಿಯಾಗಿದೆ ಎಂದು ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಕಾರ್ಯದರ್ಶಿ ಚಂದ್ರಗಿರೀಶ ಹೇಳಿದರು.

ಪಕ್ಷದ ಕಚೇರಿಯಲ್ಲಿ ಶನಿವಾರ ರಷ್ಯಾ ಸಮಾಜವಾದಿ ಮಹಾಕ್ರಾಂತಿಯ 103ನೇ ವಾರ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು. 

ಮಾರ್ಕ್ಸ್‌ವಾದ-ಲೆನಿನ್‍ವಾದ ಕೇವಲ ತತ್ವಶಾಸ್ತ್ರಗಳಲ್ಲ, ಅದು ಜಾರಿಗೆ ತರಲು ಸಾಧ್ಯ ಎನ್ನುವುದು ಸಾಬೀತಾಗಿದೆ. ಭಾರತದಲ್ಲಿರುವ ಶೋಷಕ ಬಂಡವಾಳಶಾಹಿ ವ್ಯವಸ್ಧೆಯ ವಿರುದ್ಧ ಹೋರಾಡಲು ನವೆಂಬರ್ ಕ್ರಾಂತಿ ದಾರಿದೀಪವಾಗಿದೆ ಎಂದರು.

ರಾಯಚೂರು ಜಿಲ್ಲಾ ಸಂಘಟನಾ ಸಮಿತಿಯ ಸದಸ್ಯ ಎನ್.ಎಸ್.ವೀರೆಶ, ಚನ್ನಬಸವ ಜಾನೇಕಲ್, ಮಹೇಶ ಚೀಕಲಪರ್ವಿ, ಸದ್ಯಸ ಅಣ್ಣಪ್ಪ, ಮಲ್ಲಣಗೌಡ, ಪೀರ್ ಸಾಬ್, ಮೌನೇಶ, ಕಾರ್ತಿಕ್, ಬಸವರಾಜ, ಹೇಮಂತ ಅಮೊಘ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.