ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿನಾಡಿನಲ್ಲಿ ಕನ್ನಡ ಶಾಲೆಗಳ ದಾಖಲಾತಿ ಆರಂಭ

Last Updated 29 ಜೂನ್ 2021, 12:52 IST
ಅಕ್ಷರ ಗಾತ್ರ

ಶಕ್ತಿನಗರ: ಇಲ್ಲಿನ ಗಡಿಭಾಗ ಕೃಷ್ಣಾ ಗ್ರಾಮದ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಆರಂಭಗೊಂಡಿದೆ.

ಪ್ರೌಢಶಾಲೆಯಲ್ಲಿ 257 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, 55 ವಿದ್ಯಾರ್ಥಿಗಳು 10 ನೇ ತರಗತಿಯಲ್ಲಿ ತೇಗರ್ಡೆಯಾಗಿದ್ದಾರೆ. ಈ ವರ್ಷ 65 ಹೊಸ ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ.

ಗಡಿಭಾಗದ ಕೃಷ್ಣಾ , ಇಂದುಪೂರ, ತಂಗಡಿಗಿ, ಚೇಗುಂಟ, ಗುರ್ಜಾಲ, ಐನಾಪುರ, ಗುಡೇಬಲ್ಲೂರು, ಅಡವಿಖಾನಪುರ, ಕುಸುಮತಿ, ಸುಕುಂದಲಿಂಗಂಪಲ್ಲಿ ಸೇರಿ ಒಟ್ಟು 2 ಪ್ರಾಥಮಿಕೋನ್ನತ, 7 ಪ್ರಾಥಮಿಕ ಶಾಲೆಗಳ ಸಂಖ್ಯೆ ಸೇರಿ ಒಟ್ಟು 1200 ಜನ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಡಿಜಿಟಲ್‌ ತರಗತಿಗಳು, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಗ್ರಂಥಾಲಯ, ವಿಜ್ಞಾನ ಪ್ರಯೋಗಲಯ, ಶಾಲೆಯಲ್ಲಿ ಅನುಕೂಲಗಳು ಹಾಗೂ ಬೋಧನೆಯನ್ನು ಮೆಚ್ಚಿ ಈ ವರ್ಷ ಹೆಚ್ಚಿನ ದಾಖಲಾತಿಗಳು ಬರುತ್ತಿರುವುದು ಸಂತೋಷದ ವಿಷಯ ಎಂದು ಕೃಷ್ಣಾ ಗ್ರಾಮದ ಪ್ರೌಢಶಾಲೆಯ ಮುಖ್ಯಶಿಕ್ಷಕ ನಿಜಾಮುದ್ದೀನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT