ರಾಯಚೂರು: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ರಾಜ್ಯ ಸರ್ಕಾರ ಮೂರು ವರ್ಷಗಳಲ್ಲಿ ₹1,743.42 ಕೋಟಿ ಅನುದಾನ ಒದಗಿಸಿದೆ. ರಾಯಚೂರು ವಿಭಾಗದಿಂದ ನಿಗಮಕ್ಕೆ ಒಟ್ಟು ₹ 1,798.81 ಕೋಟಿ ಆದಾಯ ಬಂದಿದೆ.

2023-24ನೇ ಸಾಲಿನಲ್ಲಿ ₹ 646.07 ಕೋಟಿ, 2024-25ನೇ ಹಣಕಾಸು ವರ್ಷದಲ್ಲಿ ₹1012.94 ಕೋಟಿ ಹಾಗೂ 2025ರ ಮೇನಲ್ಲಿ ₹ 84.41 ಕೋಟಿ ಸೇರಿದಂತೆ ಜೂನ್ 2023ರಿಂದ ಇಲ್ಲಿಯವರೆಗೆ ₹1,743.42 ಕೋಟಿ ಅನುದಾನ ಕೊಟ್ಟಿದೆ.

ಜಿಲ್ಲೆಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ 2023ರ ಜೂನ್ನಲ್ಲಿ ಸರಾಸರಿ ಶೇ 18.42ರಷ್ಟು ಇತ್ತು. 2025ರ ಏಪ್ರಿಲ್ ನಲ್ಲಿ ಶೇ 35.81ಕ್ಕೆ ತಲುಪಿದೆ. ಆದಾಯದ ಪ್ರಮಾಣವನ್ನು 2023ರ ಜೂನ್ಗೆ ಹೋಲಿಸಿದರೆ ದುಪ್ಪಟ್ಟಾಗಿದೆ. ಈ ಮೊದಲು ₹ 678.67 ಕೋಟಿ ಇದ್ದ ಆದಾಯವು 2025ರ ಏಪ್ರಿಲ್ನಲ್ಲಿ ₹ 1,798.81 ಕೋಟಿ ಹೆಚ್ಚಾಗಿದೆ.

ಶಕ್ತಿ ಯೋಜನೆ ಜಾರಿಯಾದಾಗಿನಿಂದ ರಾಯಚೂರು 1ನೇ ಘಟಕ, ರಾಯಚೂರು 2ನೇ ಘಟಕ, ರಾಯಚೂರು 3ನೇ ಘಟಕ, ಲಿಂಗಸುಗೂರು ಘಟಕ, ಸಿಂಧನೂರು, ಮಾನ್ವಿ ಘಟಕ, ದೇವದುರ್ಗ ಘಟಕ ಮತ್ತು ಮಸ್ಕಿ ಘಟಕ ಸೇರಿ ವಿವಿಧ ಘಟಕಗಳ ಬಸ್ಗಳಲ್ಲಿ 2023ರ ಜೂನ್ನಲ್ಲಿ 18.42 ಲಕ್ಷ ಮಹಿಳೆಯರು ಪ್ರಯಾಣಿಸಿದ್ದರು.

ಅದೇ ರೀತಿ 2025ರ ಜನವರಿಯಲ್ಲಿ 34.65 ಲಕ್ಷ, ಫೆಬ್ರುವರಿಯಲ್ಲಿ 34.32 ಲಕ್ಷ, ಮಾರ್ಚ್ನಲ್ಲಿ 32.83 ಲಕ್ಷ ಮತ್ತು ಏಪ್ರಿಲ್ನಲ್ಲಿ 35.81 ಲಕ್ಷ ಮಹಿಳೆಯರು ಸಂಚಾರ ಮಾಡಿದ್ದಾರೆ. ಮಹಿಳಾ ಪ್ರಯಾಣಿಕರ ಸಂಖ್ಯೆಯೂ ದುಪ್ಪಟ್ಟಾಗಿದೆ.

ಶಕ್ತಿ ಯೋಜನೆ ಜಾರಿಯಾದಾಗಿನಿಂದ ನಿಗಮಕ್ಕೆ ಗರಿಷ್ಠ ಪ್ರಮಾಣದಲ್ಲಿ ಆದಾಯ ಹರಿದುಬಂದಿದೆ. ರಾಯಚೂರು 1ನೇ ಘಟಕದಿಂದ ₹13.05 ಕೋಟಿ, ರಾಯಚೂರು 2ನೇ ಘಟಕದಿಂದ ₹43.23 ಕೋಟಿ, ರಾಯಚೂರು 3ನೇ ಘಟಕದಿಂದ ₹38.39 ಕೋಟಿ, ಲಿಂಗಸುಗೂರು ಘಟಕದಿಂದ ₹ 66.41 ಕೋಟಿ, ಸಿಂಧನೂರು ಘಟಕದಿಂದ ₹50.16 ಕೋಟಿ, ಮಾನ್ವಿ ಘಟಕದಿಂದ ₹21.77 ಕೋಟಿ , ದೇವದುರ್ಗ ಘಟಕದಿಂದ ₹42.79 ಕೋಟಿ ಹಾಗೂ ಮಸ್ಕಿ ಘಟಕದಿಂದ ₹ 44.12 ಕೋಟಿ ಆದಾಯ ಬಂದಿದೆ.

ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು 98 ಹೊಸದಾಗಿ ಅನುಸೂಚಿಗಳನ್ನು ಪ್ರಾರಂಭಿಸಲಾಗಿದೆ. ಕಾರ್ಯಾಚರಣೆಯಲ್ಲಿದ್ದ ಅನುಸೂಚಿಗಳ ಪೈಕಿ 188 ಅನುಸೂಚಿಗಳಿಗೆ ಪರಿಷ್ಕರಣೆ ಮಾಡಿ ಒಟ್ಟು 346 ಟ್ರಿಪ್ಗಳನ್ನು ಹೆಚ್ಚಿಸಲಾಗಿದೆ. ಒಟ್ಟು 159 ಹೊಸ ವಾಹನಗಳನ್ನು ಓಡಿಸಲಾಗುತ್ತಿದೆ ಎಂದು ನಿಗಮದ ರಾಯಚೂರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎಸ್.ಚಂದ್ರಶೇಖರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.