ಭಾನುವಾರ, ಏಪ್ರಿಲ್ 11, 2021
27 °C

ಶಕ್ತಿನಗರ: ನೀರಿನ ಅರವಟಿಗೆ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಕ್ತಿನಗರ: ರಾಯಚೂರು ವನಸಿರಿ ಫೌಂಡೇಶನ್ ವತಿಯಿಂದ ಶಕ್ತಿನಗರದಲ್ಲಿ ಭಾನುವಾರ ‘ಏಪ್ರಿಲ್ ಫೂಲ್ ಬದಲು, ಏಪ್ರಿಲ್ ಕೂಲ್’ ಆಚರಿಸೋಣ ಅಂಗವಾಗಿ ಪಕ್ಷಿಗಳಿಗೆ ನೀರು ಮತ್ತು ಕಾಳು ಇರಿಸಿ ಪಕ್ಷಿ ಸಂಕುಲ ಉಳಿಸಿ ಅಭಿಯಾನ ನಡೆಯಿತು.

ವನಸಿರಿ ಫೌಂಡೇಶನ್ ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಗೌಡ ಅವರು ಚಾಲನೆ ನೀಡಿದರು.

ಕಾಡ್ಲೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪಾಂಡುರಂಗ ಮಾತನಾಡಿ, ಬೇಸಿಗೆ ಬಂತೆಂದರೆ ಎಲ್ಲೆಲ್ಲೂ ವಿಪರೀತ ನೀರಿನ ಅಭಾವ. ಇಂತಹ ಸಂದರ್ಭದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು ಸಿಗದೆ, ಬಾಯಾರಿಕೆ ತೀರಿಸಿಕೊಳ್ಳಲು ಒದ್ದಾಡುತ್ತವೆ. ಹಕ್ಕಿಗಳ ಸಂಕಟವನ್ನು ಅರಿತ, ವನಸಿರಿ ಫೌಂಡೇಶನ್ ಗ್ರಾಮೀಣ ಘಟಕ ಅಭಿಯಾನದ ಮೂಲಕ ಅವುಗಳಿಗೆ ನೀರು ಮತ್ತು ಆಹಾರ ಒದಗಿಸುವ ಮಾದರಿ ಕಾರ್ಯ ಮಾಡುತ್ತಿದ್ದಾರೆ ಎಂದರು.

ಆರ್‌ಟಿಪಿಎಸ್‌ ಉದ್ಯೋಗಿ ಸೂರ್ಯಪ್ರಕಾಶ ಮಾತನಾಡಿದರು.

ಪ್ರಮುಖರಾದ ಎನ್.ಬಿ.ಶರಣು, ಮಂಜುನಾಥ, ಸುನೀಲ, ಪ್ರಶಾಂತ, ಶಿವಕುಮಾರ, ವೆಂಕಟೇಶನಾಯಕ, ವೀರೇಶ, ಸೂರ್ಯಪ್ರಕಾಶ ನಾಯಕ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು