ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ವೈದ್ಯರ ಕಾರಿನ‌ ಮೇಲೆ ಗುಂಡಿನ‌ ದಾಳಿ

Published 31 ಆಗಸ್ಟ್ 2023, 13:19 IST
Last Updated 31 ಆಗಸ್ಟ್ 2023, 13:19 IST
ಅಕ್ಷರ ಗಾತ್ರ

ರಾಯಚೂರು: ನಗರದ ವೈದ್ಯ ಡಾ.ಜಯಪ್ರಕಾಶ ಬೆಟ್ಟದೂರು ಮಧ್ಯಾಹ್ನ ರಾಯಚೂರಿನಿಂದ ಮಾನ್ವಿಗೆ ಹೋಗುವಾಗ ಸಾಥ ಮೈಲ್ ಕ್ರಾಸ್ ಹತ್ತಿರ‌ ಇವರ ಕಾರಿನ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ಗುಂಡಿನ‌ ದಾಳಿ ನಡೆಸಿದ್ದಾರೆ.

ಕಾರಿನ ಬಾನಟ್‌ಗೆ ಗುಂಡು ತಗುಲಿದ್ದು, ವೈದ್ಯರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್.ಪಿ.ನಿಖಿಲ್‌ ಪೊಲೀಸ್‌ ತಂಡದೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ದಾಳಿಗೆ ಕಾರಣ ತಿಳಿದು ಬಂದಿಲ್ಲ. ಗ್ರಾಮೀಣ ಠಾಣೆಯ ಪೊಲೀಸರು ಸಿಸಿ ಕ್ಯಾಮೆರಾಗಳ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT