ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು: ಜಿಂಕೆಯನ್ನು ರಕ್ಷಿಸಿದ ವನಸಿರಿ ತಂಡ

Published 9 ಮೇ 2024, 14:36 IST
Last Updated 9 ಮೇ 2024, 14:36 IST
ಅಕ್ಷರ ಗಾತ್ರ

ಸಿಂಧನೂರು: ನಗರದ ಪಿಡಬ್ಯೂಡಿ ಕ್ಯಾಂಪ್‌ ಕೆಪಿ ಮುಂಭಾಗದಲ್ಲಿ ಗುರುವಾರ ಜಿಂಕೆಯೊಂದು ರಸ್ತೆ ದಾಟುವಾಗ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿದ್ದು ವನಸಿರಿ ಫೌಂಡೇಶನ್ ತಂಡದವರು ಜಿಂಕೆಯನ್ನು ಪಶು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ರಕ್ಷಿಸಿದರು.

ಬಿಸಿಲಿನ ತಾಪಮಾನದಿಂದಾಗಿ ನೀರಿನ ದಾಹ ತೀರಿಸಿಕೊಳ್ಳಲು ಪಶು-ಪಕ್ಷಿಗಳು ಕಾಡಿನಿಂದ-ನಾಡಿನ ಕಡೆ ಬರುತ್ತಿವೆ. ಜಿಂಕೆಯು ಸಹ ಬಂದಿದ್ದು, ರಸ್ತೆ ದಾಟುವಾಗ ಬೈಕ್ ಡಿಕ್ಕಿಯಿಂದ ತೀವ್ರ ಗಾಯಗಳಾಗಿದ್ದವು. ‌

ವನಸಿರಿ ಫೌಂಡೇಶನ್‍ನ ಸಂಸ್ಥಾಪಕ ಅಮರೇಗೌಡ ಮಲ್ಲಾಪುರ, ಕಾಂಗ್ರೆಸ್ ಮುಖಂಡ ಗಂಗಾಧರ ಮುದಿಯಪ್ಪ ಹೊಸಳ್ಳಿ, ರಾಜು, ಕೈಫ್, ಪೊಲೀಸ್ ಇಲಾಖೆಯ ಅಧಿಕಾರಿಗಳು ಸಕಾಲಕ್ಕೆ ಗಾಯಗೊಂಡ ಜಿಂಕೆಯನ್ನು ಪಶು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಪುನಃ ಅದನ್ನು ಜೋಳದರಾಶಿ ಆಜಂನೇಯ ದೇವಸ್ಥಾನದ ಹಿಂಭಾಗದಲ್ಲಿರುವ ಹಳ್ಳದ ದಡದಲ್ಲಿ ಬಿಡಲಾಯಿತು ಎಂದು ವನಸಿರಿ ಫೌಂಡೇಶನ್‍ನ ಸಂಸ್ಥಾಪಕ ಅಮರೇಗೌಡ ಮಲ್ಲಾಪುರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT