ಗುರುವಾರ , ಜುಲೈ 16, 2020
22 °C

ರಾಯಚೂರು | ಜಿಲ್ಲೆಯಲ್ಲಿ ಒಂದೇ ದಿನ 62 ಮಂದಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಸೋಂಕಿತರ ಸಂಖ್ಯೆ 72ಕ್ಕೆ ತಲುಪಿತ್ತು. ಶುಕ್ರವಾರ ಬಂದಿರುವ ವರದಿಗಳಲ್ಲಿ ಮತ್ತೆ 62 ಜನರಿಗೆ ಕೋವಿಡ್‌ ದೃಢವಾಗಿದ್ದು, ಒಟ್ಟು ಸಂಖ್ಯೆ 134ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಿಂದ ಬಂದವರಲ್ಲಿಯೇ ಪಾಸಿಟಿವ್‌ ಪ್ರಕರಣಗಳು ಮುಂದುವರಿದಿವೆ. ಎಲ್ಲರೂ ಕ್ವಾರಂಟೈನ್‌ ಕೇಂದ್ರಗಳಲ್ಲಿದ್ದಾರೆ. ಇನ್ನೂ ಮೂರು ಸಾವಿರ ಜನರ ವರದಿ ಬರಬೇಕಿದೆ. ಸೋಂಕಿತರ ಸಂಖ್ಯೆಯು ಗಣನೀಯ ಹೆಚ್ಚಳವಾಗಿರುವುದು ಆತಂಕ ಹೆಚ್ಚಿಸಿದೆ.

ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ ಸಾವು
ರಾಯಚೂರು:
ಜಿಲ್ಲೆಯ ಒಪೆಕ್‌ ಆಸ್ಪತ್ರೆಯಲ್ಲಿ ಸರ್ಕಾರಿ ಕ್ವಾರಂಟೈನ್‌ನಲ್ಲಿದ್ದ ದೇವದುರ್ಗ ತಾಲ್ಲೂಕು ಕೊತ್ತದೊಡ್ಡಿ ಗ್ರಾಮದ ಶಿವಪ್ಪ ಬಲಿದೇವ (52) ಶುಕ್ರವಾರ ಮೃತಪಟ್ಟಿದ್ದಾರೆ.

ಮುಂಬೈನಿಂದ ಮರಳಿದ್ದ ಅವರನ್ನು ಕೊತ್ತದೊಡ್ಡಿಯ ಕಸ್ತೂರಿಬಾ ವಸತಿ ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಇರಿಸಲಾಗಿತ್ತು. ರೋಗದ ಲಕ್ಷಣಗಳು ಕಂಡುಬಂದಿದ್ದರಿಂದ ಒಪೆಕ್‌ಗೆ ಸ್ಥಳಾಂತರಿಸಿ, ಗಂಟಲು ದ್ರುವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ನೆಗೆಟಿವ್‌ ವರದಿ ಬಂದಿದೆ. ಇದೀಗ ಮತ್ತೆ ಗಂಟಲು ದ್ರುವ ಸಂಗ್ರಹಿಸಿ ಬಳ್ಳಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಸಂಜೆಯೊಳಗಾಗಿ ವರದಿ ಬರಲಿದೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು