ಪ್ರಜಾವಾಣಿ ವಾರ್ತೆ

ರಾಯಚೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ವತಿಯಿಂದ ಜಿಲ್ಲಾ ವೀರಶೈವ ಲಿಂಗಾಯತ ಸಮಾಜ ಭವನದಲ್ಲಿ ಶುಕ್ರವಾರ ಹತ್ತು ದಿನಗಳ ಸಾಬೂನು ಮೇಳ ಆರಂಭವಾಯಿತು.

ಸಭಾಂಗಣದಲ್ಲಿ ಮೈಸೂರು ಅರಮನೆಯ ದರ್ಬಾರ್ ಹಾಲ್ ಮಾದರಿ ಸೆಟ್ ನಿರ್ಮಿಸಿ ಮೈಸೂರು ಸ್ಯಾಂಡಲ್ನ 50ಕ್ಕೂ ಹೆಚ್ಚು ಉತ್ಕೃಷ್ಟ ದರ್ಜೆಯ ಉತ್ಪನ್ನಗಳ ಪ್ರದರ್ಶನ ಮಾಡಲಾಗಿದೆ.

ಕೆಲ ಉತ್ಪನ್ನಗಳಿಗೆ ರಿಯಾಯಿತಿ ಸಹ ಘೋಷಣೆ ಮಾಡಿರುವ ಕಾರಣ ಗ್ರಾಹಕರು ಆಸಕ್ತಿಯಿಂದ ಬಂದು ಉತ್ಪನ್ನಗಳನ್ನು ಖರೀದಿಸಿದರು.

ಗಂಧದ ಎಣ್ಣೆಯಿಂದ ತಯಾರಿಸಿದ ₹7,00 ಬೆಲೆಯ ಸೋಪನ್ನು ಗ್ರಾಹಕರು ಕುತೂಹಲದಿಂದ ವೀಕ್ಷಿಸಿದರು. ಪ್ರೀಮಿಯಂ ಸ್ಯಾಂಡಲ್ ಸೋಪ್ ಅನ್ನು ಗ್ರಾಹಕರು ಆಸಕ್ತಿಯಿಂದ ಖರೀದಿ ಮಾಡಿ ಪ್ರವೇಶ ದ್ವಾರದಲ್ಲಿ ಸಾಬೂನ್ ಮೇಳದ ಪ್ರೇಮ್ನಲ್ಲಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.