ಸೋಮವಾರ, ಮೇ 23, 2022
30 °C

'ಲವ್ ಕೇಸರಿ' ಸೃಷ್ಟಿಗೆ ಶ್ರೀರಾಮ ಸೇನೆ ಮುಖಂಡನಿಂದ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ‘ಲವ್‌ ಜಿಹಾದ್‌ಗೆ ವಿರುದ್ಧವಾಗಿ ಲವ್‌ ಕೇಸರಿ ಮಾಡಿ‘ ಎಂದು ಶ್ರೀರಾಮಸೇನೆಯ ಜಿಲ್ಲಾ ಸಂಚಾಲಕ ರಾಜಾಚಂದ್ರ ರಾಮನಗೌಡ ಅವರು ಶ್ರೀರಾಮಸೇನೆಯಿಂದ ಆಯೋಜಿಸಿದ್ದ ಹಿಂದುವಿ ಸಮಾವೇಶದಲ್ಲಿ ಕರೆ ನೀಡಿದ್ದಾರೆ.

‘ನಮ್ಮನೆ ಹೆಣ್ಮಕ್ಕಳನ್ನು ಕರೆದೊಯ್ದು ಮಕ್ಕಳು ಹೆರುವ ಮಷಿನ್ ಮಾಡಿದ್ದಾರೆ. ಹೀಗಾಗಿ ಪ್ರತಿ ಕಾರ್ಯಕರ್ತನು ‘ಲವ್ ಕೇಸರಿ‘ ಮಾಡಿ. ಮುಸ್ಲಿಂ ವ್ಯಕ್ತಿ ಹಿಂದೂ ಹೆಣ್ಮಕ್ಕಳಿಗೆ ತೊಂದರೆ ಕೊಟ್ಟರೆ, ನಮಗೆ ಮಾಹಿತಿ ಕೊಡಿ. ಅಂಥವರ ಜನನಾಂಗ ಕತ್ತರಿಸಿ ಹಾಕೋಣ‘ ಎಂದು ಭಾನುವಾರ ತಡರಾತ್ರಿ ನಡೆದ ಸಮಾವೇಶದ ವೇದಿಕೆಯಲ್ಲಿ ಹೇಳಿದ್ದಾರೆ.

ವೇದಿಕೆಯಲ್ಲಿ ರಾಜಾಚಂದ್ರ, ಮಂಜುನಾಥ ಬಾವಿ ಮತ್ತಿತರರು ತಲ್ವಾರ್ ಪ್ರದರ್ಶನ ಪ್ರದರ್ಶನ ಮಾಡಿರುವ ವಿಡಿಯೋ ವೈರಲ್‌ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು