ಸಿಂಧನೂರು: ‘ಈಚೆಗೆ ಅಪಘಾತದಲ್ಲಿ ಅಕಾಲಿಕವಾಗಿ ಮೃತಪಟ್ಟ ಕ್ಲಬ್ ಸದಸ್ಯ ದೀಪುಗೌಡ ಕೆಂಚನಗುಡ್ಡ ಅವರ ಸ್ಮರಣಾರ್ಥ ಫ್ಯಾಮಿಲಿ ರಿಕ್ರಿಯೇಶನ್ ಕ್ಲಬ್ ಸಿಂಧನೂರು ವತಿಯಿಂದ ನಗರದಲ್ಲಿ ಜೂ.13ರಿಂದ ಮೂರು ದಿನಗಳ ಕಾಲ ರಾಜ್ಯ ಮಟ್ಟದ ಬಾಡ್ಮಿಂಟನ್ ಟೂರ್ನಿ ಹಮ್ಮಿಕೊಳ್ಳಲಾಗಿದೆ’ ಎಂದು ಕ್ಲಬ್ ಅಧ್ಯಕ್ಷ ಸಿ.ಟಿ.ಪಾಟೀಲ್ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಓಪನ್ ಡಬಲ್ಸ್ ಪ್ರಥಮ ಬಹುಮಾನ ₹40 ಸಾವಿರ, ದ್ವಿತೀಯ ₹20 ಸಾವಿರ, ತೃತೀಯ ₹10 ಸಾವಿರ, ಚತುರ್ಥ ಬಹುಮಾನ ಟ್ರೋಫಿ. ಓಪನ್ ಸಿಂಗಲ್ಸ್ ಪ್ರಥಮ ₹30 ಸಾವಿರ, ದ್ವಿತೀಯ ₹15 ಸಾವಿರ, ತೃತೀಯ ₹10 ಸಾವಿರ, ಚತುರ್ಥ ಬಹುಮಾನ ಟ್ರೋಫಿ ನೀಡಗುವುದು. ಡಬಲ್ಸ್ 40 ಪ್ಲಸ್ ಹಾಗೂ ಜಂಬ್ಲೆಡ್ ಡಬಲ್ಸ್ 75 ಪ್ಲಸ್ ಆಟಗಳು ಇರಲಿವೆ’ ಎಂದು ಮಾಹಿತಿ ನೀಡಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ 150 ರಿಂದ 200 ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆಯಿದೆ. ಸಿಂಗಲ್ಸ್ ₹700, ಡಬಲ್ಸ್ ₹1200, ಅಂಡರ್ 17 ಬಾಯ್ಸ್ ಸಿಂಗಲ್ ₹500 ಹಾಗೂ ಡಬಲ್ಸ್ ₹1000 ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿದೆ. ಆಟಗಾರರು ವಯಸ್ಸಿನ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ತರುವುದು ಕಡ್ಡಾಯ. ಜಂಬ್ಲೆಡ್ ಡಬಲ್ಸ್ ಇಬ್ಬರು ಸ್ಪರ್ಧಾಳುಗಳ ವಯಸ್ಸು ಸೇರಿ 75 ಆಗಿರಬೇಕು. ಜೂ.13 ರಂದು ಅಂಡರ್ 17 ಬಾಯ್ಸ್ ಸಿಂಗಲ್ಸ್ ಮತ್ತು ಡಬಲ್ಸ್ ಟೂರ್ನಿ ನಡೆಯಲಿದೆ. ಎಲ್ಲ ಸ್ಪರ್ಧಾಳುಗಳಿಗೆ ಉಪಹಾರ, ಊಟದ ವ್ಯವಸ್ಥೆ ಕಲ್ಪಿಸಲಾಗವುದು. ಹೆಚ್ಚಿನ ಮಾಹಿತಿಗಾಗಿ ಮೊ.9900643697, 9448439333, 9538123143ಗೆ ಸಂಪರ್ಕಿಸಬಹುದು’ ಎಂದು ತಿಳಿಸಿದರು.

ಕಾರ್ಯದರ್ಶಿ ಬಸವರಾಜ ಸಿದ್ದಾಂತಿಮಠ ಮಾತನಾಡಿದರು.

ಕ್ಲಬ್ ಸದಸ್ಯರಾದ ಆರ್.ಸಿ.ಪಾಟೀಲ್, ಕೃಷ್ಣಾ ರೆಡ್ಡಿ, ಲಿಂಗರಾಜ, ವಿನೋದಕುಮಾರ, ಅರವಿಂದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.