ಶಕ್ತಿನಗರ: ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭ

ಶಕ್ತಿನಗರ: 'ಜ್ಞಾನ ಸಮುದ್ರದ ವೈಶಾಲ್ಯತೆಯನ್ನು ಮೀರಿದ ಸಾಧನಶೀಲತೆಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು' ಎಂದು ಆರ್‌ಟಿಪಿಎಸ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಶಶಿಕಾಂತ ಹೇಳಿದರು.
ಕರ್ನಾಟಕ ವಿದ್ಯುತ್ ನಿಗಮದ(ಕೆಪಿಸಿಎಲ್)ದಯಾನಂದ ಆಂಗ್ಲೋ ವೇದಿಕೆಯ(ಡಿಎವಿ ಪಬ್ಲಿಕ್ ಸ್ಕೂಲ್) ಶಾಲೆಯಲ್ಲಿ 2021-22ನೇ ಸಾಲಿನ ಶಾಲಾ ವಿದ್ಯಾರ್ಥಿ ಪರಿಷತ್ತಿನ ವಿವಿಧ ಸ್ಥಾನಗಳಿಗೆ ಮೆರಿಟ್ ವಿದ್ಯಾರ್ಹತೆಯ ಮೇಲೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ದೈಹಿಕ ಶಿಕ್ಷಣ ಶಿಕ್ಷಕರು, ವಿದ್ಯಾರ್ಥಿ ಪರಿಷತ್ತಿನ ಸದಸ್ಯರ ಆಕರ್ಷಕ ಸಮವಸ್ತ್ರದೊಂದಿಗಿನ ಸಾಮೂಹಿಕ ಪಥಸಂಚಲನ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಪ್ರಾಚಾರ್ಯ ವಿ.ಕೆ. ಅಂಗಡಿ ಸ್ವಾಗತಿಸಿದರು.
ಶಿಕ್ಷಕಿ ಗೀತಾ ನಾಯಕ ನಿರೂಪಿಸಿದರು. ಶಿಕ್ಷಕ ಮೋಹನ ಉಪ್ಪೇರಿ ವಂದಿಸಿದರು.
ಆರ್‌ಟಿಪಿಎಸ್ ಮುಖ್ಯ ಎಂಜಿನಿಯರ್ ರಾಜಮುಡಿ, ಕೇಂದ್ರ ಭದ್ರತಾ ಪಡೆಯ(ಸಿಐಎಸ್‌ಎಫ್) ಕಮಾಂಡೆಂಟ್ ಸಂತೋಷ್ ಕುಮಾರ್ ಪಾಸ್ವಾನ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.