ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಧಾಕೃಷ್ಣನ್ ಶಿಕ್ಷಕರಿಗೆ ಆದರ್ಶ ವ್ಯಕ್ತಿ'

Last Updated 5 ಸೆಪ್ಟೆಂಬರ್ 2020, 15:01 IST
ಅಕ್ಷರ ಗಾತ್ರ

ರಾಯಚೂರು: ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ದೇಶಕಂಡ ಅತ್ಯಂತ ಆದರ್ಶ ಶಿಕ್ಷಕರು. ಅವರ ಆದರ್ಶ ಗುಣಗಳು ಇಂದಿನ ಶಿಕ್ಷಕರಿಗೆ ಮಾದರಿಯಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಎನ್.ಎಸ್. ಬೋಸರಾಜು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಡಾ. ಸರ್ವಪಲ್ಲಿ ರಾಧಕೃಷ್ಣನ್ ಅವರ ಜನ್ಮದಿನ ನಿಮಿತ್ತ ಗುರು ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಧಾಕೃಷ್ಣನ್ ಅವರು ಮಹಾಮೇಧಾವಿ, ತತ್ವಜ್ಞಾನಿಯಾಗಿದ್ದರು. ಅವರು ರಾಷ್ಟ್ರಪತಿಯಂತಹ ಹುದ್ದೆ ನಿರ್ವಹಿಸಿದರೂ ಆದರ್ಶ ಶಿಕ್ಷಕರಾಗಿ ಹೆಚ್ಚು ಮೆಚ್ಚುಗೆ ಪಡೆದಿದ್ದಾರೆ. ಉಪರಾಷ್ಟ್ರಪತಿಯಾಗಿ ನೇಮಕಗೊಂಡಾಗ ಅವರ ಶಿಷ್ಯ ವೃಂದ ಬೃಹತ್ ಮೆರವಣಿಗೆ ಮೂಲಕ ರೈಲ್ವೆ ನಿಲ್ದಾಣದವರೆಗೆ ಬೀಳ್ಕೊಟ್ಟಿದ್ದನ್ನು ಸ್ಮರಿಸಬಹುದು ಎಂದರು.

ದೇಶದಲ್ಲಿ ಕೋವಿಡ್‌ನಿಂದಾಗಿ ಶಿಕ್ಷಣ ಕ್ಷೇತ್ರ ತಲ್ಲಣಗೊಂಡಿದ್ದು, ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ. ಅತಿಥಿ ಶಿಕ್ಷಕರು, ಖಾಸಗೀ ಶಾಲಾ ಶಿಕ್ಷಕರಿಗೆ ವೇತನವಿಲ್ಲದೇ ಜೀವನ ನಡೆಸಲು ಸಮಸ್ಯೆಯಾಗಿದ್ದು ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ಮುಖಂಡ ಕೆ.ಶಾಂತಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗುರುಗಳು ಹಾಗೂ ವಿದ್ಯಾರ್ಥಿಗಳ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗುತ್ತಿದೆ. ಹಿಂದೆ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ದೇವರ ಸ್ವರೂಪದಲ್ಲಿ ಕಾಣುತ್ತಿದ್ದರು. ಸರ್ವಪಲ್ಲಿ ರಾಧಾಕೃಷ್ಣರವರು ಶಿಕ್ಷಣ ಕ್ಷೇತ್ರ ಹಾಗೂ ರಾಷ್ಟ್ರಕ್ಕೆ ನೀಡಿದ ಕೊಡುಗೆ ಅಪಾರವೆಂದು ತಿಳಿಸಿದರು.

ಮುಖಂಡ ಎ.ವಸಂತಕುಮಾರ, ಜಿ.ಬಸವರಾಜರೆಡ್ಡಿ, ಜಯಣ್ಣ, ಅಮರೇಗೌಡ ಹಂಚಿನಾಳ, ಜಿ.ಶಿವಮೂರ್ತಿ, ತಾಯಣ್ಣ ನಾಯಕ, ರುದ್ರಪ್ಪ ಅಂಗಡಿ, ರಸೂಲ್ ಸಾಬ್, ಎಂ.ಕೆ.ಬಾಬರ್, ಆಂಜನೇಯ ಕುರುಬದೊಡ್ಡಿ, ಅರುಣ ದೋತರಬಂಡಿ, ಕೆ.ನರಸಿಂಹ ನಾಯಕ, ಅರುಣ ಕುಮಾರ,ಶ್ರೀನಿವಾಸ ಪೋತಗಲ್, ಶಶಿಕಲಾ ಭೀಮರಾಯ, ಮಂಜುಳಾ ಆದೋನಿ, ವಂದನಾ, ಮಾಲಾ ಭಜಂತ್ರಿ, ರಜಿಯಾಬೇಗಂ, ಸರಸ್ವತಿ, ಮುರಳಿ, ಎಸ್.ರವೀಂದ್ರನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT