ಹಟ್ಟಿ ಪಟ್ಟಣದ ಮುಖ್ಯ ರಸ್ತೆ ಅಗೆದ ಗುತ್ತಿಗೆದಾರ ಮಣ್ಣು ತೆರವುಗೊಳಿಸದಿರುವುದರಿಂದ ಜನರಿಗೆ ಸಮಸ್ಯೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು
ಲಾಲ್ ಪೀರ್ ಸಮಾಜ ಸೇವಕ
ಹಟ್ಟಿ ಬಸ್ ನಿಲ್ದಾಣ ಸಂಪೂರ್ಣ ಕೆಸರು ಗದ್ದೆಯಾಗಿದೆ. ನಿತ್ಯ ಇಬ್ಬರು ಬೈಕ್ ಸವಾರರು ಕೆಸರಿನಲ್ಲಿ ಜಾರಿ ಬೀಳುತ್ತಿದ್ದಾರೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಲು ಪ.ಪಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು
ವೆಂಕಟೇಶ ಗಿರಿ ಹಟ್ಟಿ ನಿವಾಸಿ
ಹಟ್ಟಿ ಮುಖ್ಯ ರಸ್ತೆಗೆ ಧೂಳು ನಿಯಂತ್ರಣಕ್ಕೆ ನೀರು ಹಾಕಿದ್ದರಿಂದ ರಸ್ತೆ ಕೆಸರುಮಯವಾಗಿದೆ. ಜನರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು