ಗುರುವಾರ , ಡಿಸೆಂಬರ್ 3, 2020
21 °C

ಕಾರುಗಳ ಮಧ್ಯೆ ಡಿಕ್ಕಿ: ಮೂವರು ವಿದ್ಯಾರ್ಥಿಗಳು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ತಾಲ್ಲೂಕಿನ ಮಂಜರ್ಲಾ ಕ್ರಾಸ್ ಸಮೀಪ ಬುಧವಾರ ಬೆಳಗಿನ ಜಾವ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಎಂಬಿಬಿಎಸ್ ಓದುತ್ತಿದ್ದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ರಾಯಚೂರಿನ ನವೋದಯ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದ ಬಸವರಾಜ, ಗಣೇಶ ಹಾಗೂ ಅಭಿಷೇಕ ಮೃತಪಟ್ಟಿದ್ದಾರೆ. ಸಿದ್ದಾರ್ಥ ಮತ್ತು ಭೀಮರೆಡ್ಡಿ ಇಬ್ಬರು ವಿದ್ಯಾರ್ಥಿಗಳು  ಗಾಯಗೊಂಡಿದ್ದು, ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಅಪಘಾತದಲ್ಲಿ ಸಿಂಧನೂರಿನ ಬಸವರಾಜ (23) , ಬೆಂಗಳೂರಿನ ಗಣೇಶ(23) ಹಾಗೂ ಲಿಂಗಸುಗೂರು ತಾಲ್ಲೂಕು ಮುದಗಲ್ ನ ಅಭಿಷೇಕ(23) ಎಂಬುವವರು ಮೃತಪಟ್ಟಿದ್ದಾರೆ.

ಒಂದು ಕಾರು ಯರಗೇರಾದಿಂದ ಬರುತ್ತಿತ್ತು ಹಾಗೂ ಇನ್ನೊಂದು ರಾಯಚೂರಿನಿಂದ ಯರಗೇರಾದತ್ತ ಸಂಚರಿಸುತ್ತಿತ್ತು.

ಯರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನಷ್ಟು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು