ರಾಯಚೂರು: ಗುಡುಗು, ಸಿಡಿಲಿಗೆ ಆತಂಕಪಟ್ಟ ಜನರು

ರಾಯಚೂರು: ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಸೋಮವಾರ ಬೆಳಿಗ್ಗೆ 11 ಗಂಟೆಗೆ ಗುಡುಗು, ಸಿಡಿಲಿನ ಅಬ್ಬರವನ್ನು ಕೇಳಿ ಆಂತಕಕ್ಕೊಳಗಾಗಿದ್ದರು.
ಸುಮಾರು ಅರ್ಧಗಂಟೆ ಅವಧಿಯಲ್ಲಿ ಕಿವಿ ಪರಧೆ ಹರಿಯುವಂತೆ ಸಿಡಿಲಿನ ಅಬ್ಬರವಿತ್ತು. ಬಾಗಿಲು, ಕಿಟಕಿ ಬಂದ್ ಮಾಡಿಕೊಂಡು ಜನರು ಮನೆಯೊಳಗೆ ಸೇರಿದರು. ನಿರೀಕ್ಷಿಯಂತೆ ಆನಂತರ ಕೊಳವೆಗಳಿಂದ ನೀರು ಹರಿಸಿದಂತೆ ಬಿರುಸಿನಿಂದ ಮಳೆ ಸುರಿಯಲಾರಂಭಿಸಿತು.
10 ನಿಮಿಷಗಳಲ್ಲಿ ರಸ್ತೆ, ಚರಂಡಿ ಹಾಗೂ ತಗ್ಗುಪ್ರದೇಶಗಳೆಲ್ಲವೂ ಜಲಾವೃತವಾಗಿದ್ದವು. ಮಹಾವೀರ ವೃತ್ತದಿಂದ ಬಂಗಿಕುಂಟಾ ರಸ್ತೆ ಮಾರ್ಗ, ಸಿಯಾತಾಲಾಬ್, ಗಂಜ್ ಸುತ್ತಮುತ್ತಲೂ ನೀರು ಸಂಗ್ರಹವಾಗಿತ್ತು. ವಾಹನಗಳು ಸಂಚರಿಸುವುದು ಸಂಕಷ್ಟಮಯವಾಗಿತ್ತು.
ತಗ್ಗುಪ್ರದೇಶದ ರಸ್ತೆಗಳೆಲ್ಲವೂ ಕಾಲುವೆಗಳಾಗಿದ್ದವು. ಅರ್ಧಗಂಟೆ ಸುರಿದ ಮಳೆಯಿಂದ ರಸ್ತೆಯಲ್ಲಿದ್ದ ಘನತ್ಯಾಜ್ಯವೆಲ್ಲವೂ ಚರಂಡಿಗೆ ಸೇರಿಕೊಂಡಿತು. ಇದರಿಂದ ಕೆಲವು ಕಡೆಗಳಲ್ಲಿ ಚರಂಡಿಗಳು ಸ್ಥಗಿತಗೊಂಡು ಸಮಸ್ಯೆ ಸೃಷ್ಟಿಯಾಗಿತ್ತು.
ಜೇಗರಕಲ್, ಮರ್ಚೆಡ್, ಮಲ್ಲಾಪುರ, ಕಡಗಂದೊಡ್ಡಿ, ಚಂದ್ರಬಂಡಾದಲ್ಲಿ ಮಳೆ ಸುರಿದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.