ಶನಿವಾರ, ಆಗಸ್ಟ್ 13, 2022
27 °C

ರಾಯಚೂರು: ಖಾಸಗಿ ವಾಹನಗಳಿಂದ ಪ್ರಯಾಣಿಕರ ಸುಲಿಗೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಸರ್ಕಾರಿ ಬಸ್ಗಳ ಸಂಚಾರ ಸ್ಥಗಿತವನ್ನು ಅವಕಾಶ ಮಾಡಿಕೊಂಡಿರುವ ಖಾಸಗಿ ವಾಹನದಾರರು, ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿವೆ.

ಆಟೊಗಳು ಕೂಡಾ ಬಸ್ ಪ್ರಯಾಣ ದರಕ್ಕಿಂತ ಆರು ಪಟ್ಟು ಹೆಚ್ಚು ಹಣ ಕೇಳುತ್ತಿದ್ದಾರೆ. ರಾಯಚೂರಿನಿಂದ 25 ಕಿಲೋ ಮೀಟರ್ ದೂರದ ಕಲ್ಲೂರಿಗೆ ₹27 ಬಸ್ ಪ್ರಯಾಣ ದರವಿದೆ. ಆಟೊದವರು ₹400 ಕೇಳುತ್ತಿದ್ದಾರೆ. 50 ಕಿಲೋ ಮೀಟರ್‌ ದೂರವಿರುವ ಮಾನ್ವಿಗೆ ತೆರಳಲು ಖಾಸಗಿ ವಾಹನದಾರರು ₹120 ಕೇಳುತ್ತಿದ್ದಾರೆ.

ಪೂರ್ವ ಮಾಹಿತಿಯಿಲ್ಲದೆ ಬಸ್ ನಿಲ್ದಾಣಕ್ಕೆ ಬಂದಿರುವ ಪ್ರಯಾಣಿಕರು ಹಾಗೂ ಬೆಳಿಗ್ಗೆ ಸರ್ಕಾರಿ ಬಸ್ ಮೂಲಕ ವಿವಿಧ ಕಡೆಯಿಂದ ರಾಯಚೂರಿಗೆ ಬಂದಿರುವವರು ತೊಂದರೆ ಅನುಭವಿಸುತ್ತಿದ್ದಾರೆ. ದುಬಾರಿ ಪ್ರಯಾಣ ದರ ಭರಿಸಲು ಸಾಧ್ಯವಾಗದವರ ಸಂಕಷ್ಟ ಪಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು