ತುರ್ವಿಹಾಳ: ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿ ಕೆಕೆಆರ್‌ಡಿಬಿ ಮೈಕ್ರೋ ಹಾಗೂ ಕೆಸೋಟೆಕ್ ನಿರ್ಮಿತ ಕೇಂದ್ರದ ಯೋಜನೆಯಡಿ ಅಂದಾಜು ₹4 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಆರ್.ಬಸನಗೌಡ ತುರವಿಹಳ ಗುರುವಾರ ಭೂಮಿಪೂಜೆ ನೆರವೇರಿಸಿದರು.

ಸ್ಥಳೀಯ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ₹1.5 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣದ ನಿರ್ಮಾಣ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ₹40 ಲಕ್ಷ ವೆಚ್ಚದಲ್ಲಿ ಮೂರು ಹೆಚ್ಚುವರಿ ಕೊಠಡಿ, ರಾಘವೇಂದ್ರ ಕ್ಯಾಂಪ್‌ನ ಸರ್ಕಾರಿ ಶಾಲೆಗೆ ₹28 ಲಕ್ಷ ವೆಚ್ಚದಲ್ಲಿ ಎರಡು ಕೊಠಡಿ, ಗುಂಜಹಳ್ಳಿ ಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ₹ 38.12ಲಕ್ಷ ವೆಚ್ಚದಲ್ಲಿ 2 ಹೆಚ್ಚುವರಿ ಕೊಠಡಿಗಳ ಕಾಮಗಾರಿ ಸೇರಿದಂತೆ ಉಮಲೂಟಿ ಗ್ರಾಮದ ಮೊರಾರ್ಜಿ ವಸತಿ ಶಾಲೆಗೆ ₹52 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣ ಹಾಗೂ ಮಾಟೂರು ಗ್ರಾಮದಲ್ಲಿ ನೂತನ ಬಸ್ ನಿಲ್ದಾಣಕ್ಕೆ ₹14.7 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಕ್ಷೇತ್ರದ ಅಭಿವೃದ್ಧಿ ಮಾಡುವುದು ನನ್ನ ಗುರಿಯಾಗಿದ್ದು ಸಾರ್ವಜನಿಕರ ಸಹಕಾರ ಅಗತ್ಯ, ಅಧಿಕಾರಿಗಳು ಹಾಗೂ ಗುತ್ತೆದಾರರು ಕಾಮಗಾರಿ ನಿರ್ಮಾಣದಲ್ಲಿ ಗುಣಮಟ್ಟ ಕಾಪಾಡಬೇಕು’ ಎಂದರು.

ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ಕೆ.ಶಾಮೀದಸಾಬ್ ಚೌದ್ರಿ, ಮಲ್ಲನಗೌಡ ದೇವರಮನಿ, ಫಾರೂಖ್ ಸಾಬ್ ಖಾಜಿ, ಉಮರ ಸಾಬ್, ಮೌಲಪ್ಪಯ್ಯ ಗುತ್ತೇದಾರ, ಹನುಮಂತಪ್ಪ ಮುದ್ದಾಪುರ, ಮೈಬುಸಾಬ್ ಮುದ್ದಾಪುರ, ಭೀಮಣ್ಣ, ಬಾಪುಗೌಡ ದೇವರಮನಿ, ಶರಣಪ್ಪ ಹೊಸಗೌಡ್ರು, ಕರಿಯಪ್ಪ ವಿರುಪಾಪುರ, ಶಾಮೀದ ಅಲಿ, ಫಕೀರಪ್ಪ ಭಂಗಿ, ಶಂಕ್ರಗೌಡ, ಸೋಮನಾಥ ಮಾಟೂರು, ರಾಮಣ್ಣ, ಮೌಲಾಸಾಬ, ರಮೇಶ ಯಾದವ, ಬಲವಂತರಾಯ ಗೌಡ ಗುತ್ತೇದಾರ, ಎಇಇ ಕೌಸರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.