ಗುರುವಾರ , ಮೇ 19, 2022
20 °C

ರಾಯಚೂರು: ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ತಾಲ್ಲೂಕಿನ ಡಿ.ರಾಂಪೂರ, ಬೂರ್ದಿಪಾಡ ಹತ್ತಿರ ಕೃಷ್ಣಾನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವ ಯೋಜನೆ ದಶಕದಿಂದ ನನೆಗುದಿಗೆ ಬಿದ್ದಿದ್ದು, ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ನಡುಗಡ್ಡೆ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕಲ್ಯಾಣ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಜಿಲ್ಲಾಡಳಿತಕ್ಕೆ ಬುಧವಾರ ಮನವಿ ಸಲ್ಲಿಸಲಾಯಿತು.

ಕುರ್ವಕಲಾ ಮತ್ತು ಖುರ್ವಕುರ್ದ ನಡುಗಡ್ಡೆ ಗ್ರಾಮಗಳಿಗೆ ಸೇತುವೆ ನಿರ್ಮಿಸುವುದಕ್ಕೆ ಅಂದಿನ ಅಂಧ್ರಪ್ರದೇಶ ಸರ್ಕಾರವು ಅನುದಾನ ಒದಗಿಸಿದೆ. 18 ವರ್ಷಗಳಾದರೂ ಸೇತುವೆ ನಿರ್ಮಿಸುತ್ತಿಲ್ಲ. ಲೋಕೋಪಯೋಗಿ ಇಲಾಖೆಯು ಈ ಬಗ್ಗೆ ಕ್ರಮ ವಹಿಸುತ್ತಿಲ್ಲ ಎಂದರು.

ಜುರಾಲಾ ಪ್ರಿಯದರ್ಶಿನಿ ಆಣೆಕಟ್ಟು ನಿರ್ಮಾಣವಾಗಿದ್ದರೂ, ಅದರ ಹಿನ್ನೀರಿನಲ್ಲಿರುವ ನಡುಗಡ್ಡೆಗಳಿಗೆ ಸೇತುವೆ ನಿರ್ಮಿಸದೆ ಜನರಿಗೆ ತೊಂದರೆಗೀಡು ಮಾಡಲಾಗಿದೆ. ಸಂಬಂಧಿತ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದಲ್ಲದೆ, ಬರೀ ಬಡ್ಡಿ ಸಂಗ್ರಹಕ್ಕೆ ಇಟ್ಟುಕೊಳ್ಳಲಾಗಿದೆ. ಈಗಲಾದರೂ ಜಿಲ್ಲಾಡಳಿತವು ಎಚ್ಚೆತ್ತುಕೊಂಡು ನಡುಗಡ್ಡೆಗಳ ಶಾಶ್ವತ ಸ್ಥಳಾಂತರ ಮತ್ತು ಸೇತುವೆಗಳ ನಿರ್ಮಾಣಕ್ಕೆ ಕ್ರಮ ವಹಿಸಬೇಕು ಎಂದು ರೈತರು ಒತ್ತಾಯಿಸಿದರು.

ಜಿಲ್ಲಾ ಅಧ್ಯಕ್ಷ ರಂಗನಾಥ, ಕಲ್ಯಾಣ ಕರ್ನಾಟಕ ಜಿಲ್ಲೆಗಳ ಅಧ್ಯಕ್ಷ ಜಿಂದಪ್ಪ ವಡ್ಲೂರು, ನರಸಿಂಹಲು, ಚನ್ನಬಸಪ್ಪ, ಕೆ.ರಂಗನಾಥ, ಕೆ.ಮಲ್ಲಪ್ಪ, ನರಸಿಂಹಲು ನಾಯಕ, ಸುಗೂರಪ್ಪ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು