ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು: 5 ಮತಗಟ್ಟೆಗಳಲ್ಲಿ ಮತದಾನ

Published 31 ಮೇ 2024, 14:27 IST
Last Updated 31 ಮೇ 2024, 14:27 IST
ಅಕ್ಷರ ಗಾತ್ರ

ಸಿಂಧನೂರು: ವಿಧಾನ ಪರಿಷತ್ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಅಂಗವಾಗಿ ತಾಲ್ಲೂಕಿನಲ್ಲಿ ಐದು ಮತಗಟ್ಟೆಗಳಲ್ಲಿ ಜೂ.3 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ ಎಂದು ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ತಿಳಿಸಿದ್ದಾರೆ.

ಶುಕ್ರವಾರ ಹೇಳಿಕೆ ನೀಡಿರುವ ಅವರು,‘ಪಟ್ಟಣದ ಮತದಾರರು ನಗರದ ಮಿನಿವಿಧಾನಸೌಧ ಕಚೇರಿಯ ನ್ಯಾಯಾಲಯ ಸಭಾಂಗಣ ಹಾಗೂ ಸಿಬ್ಬಂದಿ ಕೊಠಡಿ ಸಂಖ್ಯೆ-3ರಲ್ಲಿ, ಸಿಂಧನೂರು ಗ್ರಾಮೀಣ, ಜಾಲಿಹಾಳ, ಸಾಲಗುಂದಾ, ಕುನ್ನಟಗಿ, ಗೊರೇಬಾಳ, ಹುಡಾ ಮತ್ತು ಬಾದರ್ಲಿ ಕಂದಾಯ ಹೋಬಳಿಗಳ ಎಲ್ಲ ಅರ್ಹ ಮತದಾರರು ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ, ತುರ್ವಿಹಾಳ ಮತ್ತು ಗುಂಜಳ್ಳಿ ಕಂದಾಯ ಹೋಬಳಿಯ ಮತದಾರರು ತುರ್ವಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು ಜವಳಗೇರಾ, ವಲ್ಕಂದಿನ್ನಿ ಮತ್ತು ಹೆಡಗಿನಾಳ ಕಂದಾಯ ಹೋಬಳಿಯ ಮತದಾರರು ಜವಳಗೇರಾ ಸರ್ಕಾರಿ ಪ್ರೌಢಶಾಲೆಯಲ್ಲಿ ಮತ ಚಲಾಯಿಸಬೇಕು’ ಎಂದು ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಅರ್ಹ ನೋಂದಾಯಿತ ಪದವೀಧರ ಪುರುಷರು 2832, ಮಹಿಳೆಯರು 1257 ಸೇರಿ ಒಟ್ಟು 4089 ಮತದಾರರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT