ಮಾನ್ವಿ (ರಾಯಚೂರು ಜಿಲ್ಲೆ): ತಾಲ್ಲೂಕಿನ ನೀರಮಾನ್ವಿ ಗುಡ್ಡದಲ್ಲಿ ಚಿರತೆ ಮರಿಯೊಂದನ್ನು ಗ್ರಾಮಸ್ಥರೆ ಭಾನುವಾರ ಸೆರೆಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಗ್ರಾಮದ ಕುರಿಗಾಯಿಗಳು ಬೆಳಿಗ್ಗೆ ಕುರಿಗಳೊಂದಿಗೆ ಗುಡ್ಡ ಏರಿ ಹೋಗುವಾಗ ಎರಡು ಚಿರತೆ ಮರಿಗಳು ಓಡಿ ಬಂದಿವೆ. ಗಾಬರಿಯಾದ ಕುರಿಗಾಯಿಗಳು ಚಿರತೆ ಮರಿಗಳನ್ನು ಬೆದರಿಸಿದ್ದಾರೆ. ಒಂದು ಚಿರತೆ ಮರಿ ಗುಡ್ಡದಲ್ಲಿ ಓಡಿ ಮರೆಯಾಗಿದೆ. ಇನ್ನೊಂದು ಮರಿಯು ಮರ ಏರಿ ಕುಳಿತಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಮರ ಏರಿದ್ದ ಚಿರತೆ ಮರಿಯನ್ನು ಬಲೆಹಾಕಿ ಹಿಡಿದಿದ್ದಾರೆ.
ಕೆಲವು ದಿನಗಳ ಹಿಂದೆಯೇ ನೀರಮಾನ್ವಿ ಗುಡ್ಡದ ಸಮೀಪದ ಜಮೀನಿನಲ್ಲಿ ದೊಡ್ಡ ಚಿರತೆಯ ಹೆಜ್ಜೆಗಳ ಗುರುತುಗಳು ಪತ್ತೆಯಾಗಿದ್ದವು.

ಅದಕ್ಕೂ ಮೊದಲು ಒಂದು ತಿಂಗಳು ಹಿಂದೆ ಒಂದು ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದರು. ಈಗ ಇನ್ನೊಂದು ಚಿರತೆಯು ತನ್ನ ಮರಿಗಳೊಂದಿಗೆ ಕಾಣಿಸಿಕೊಂಡಂತಾಗಿದೆ. ತಾಯಿ ಚಿರತೆ ಎಲ್ಲಿದೆ ಎನ್ನುವುದು ಗೊತ್ತಾಗಿಲ್ಲ. ಆದರೆ, ಗ್ರಾಮದಲ್ಲಿ ಆತಂಕ ಮನೆಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.