ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶಾಲ್ ಮಾರ್ಟ್‌ಗೆ ₹ 8 ಸಾವಿರ ದಂಡ

Published 15 ಏಪ್ರಿಲ್ 2024, 16:21 IST
Last Updated 15 ಏಪ್ರಿಲ್ 2024, 16:21 IST
ಅಕ್ಷರ ಗಾತ್ರ

ರಾಯಚೂರು: ಗ್ರಾಹಕನಿಗೆ ಕೈಚೀಲ ಕೊಟ್ಟು ₹18 ಪಡೆದಿದ್ದಕ್ಕೆ ಇಲ್ಲಿಯ ಜಿಲ್ಲಾ ಗ್ರಾಹಕರ ಆಯೋಗ ನಗರದ ಚಂದ್ರಮೌಳೇಶ್ವರ ವೃತ್ತದಲ್ಲಿರುವ ವಿಶಾಲ್‌ ಮಾರ್ಟ್‌ಗೆ ₹ ₹8 ಸಾವಿರ ದಂಡ ವಿಧಿಸಿದೆ.

2023ರ ಏಪ್ರಿಲ್ 15ರಂದು ಎ.ಮಾರೆಪ್ಪ ಅವರು ವಿಶಾಲ್‌ ಮಾರ್ಟ್‌ಗೆ ತೆರಳಿ ಅಗತ್ಯ ವಸ್ತುಗಳನ್ನು ಖರೀದಿಸಿ ₹585 ಬಿಲ್‌ ಪಡೆದಿದ್ದರು. ಸಾಮಾನುಗಳನ್ನು ಚೀಲಗಳಲ್ಲಿ ಹಾಕಿ ಕೊಡುವಂತೆ ಕೇಳಿಕೊಂಡಾಗ ಅಲ್ಲಿನ ಸಿಬ್ಬಂದಿ ₹18 ಅನ್ನು ಬಿಲ್‌ನಲ್ಲಿ ನಮೂದಿಸಿ ಕೊಟ್ಟಿದ್ದರು.

ಕಾಯ್ದೆ ಪ್ರಕಾರ ಗ್ರಾಹಕರಿಗೆ ಚೀಲ ಉಚಿತವಾಗಿ ಕೊಡಬೇಕು. ಅದಕ್ಕೆ ಅಲ್ಲಿನ ಸಿಬ್ಬಂದಿ ಒಪ್ಪಿರಲಿಲ್ಲ. ಹೀಗಾಗಿ ಮಾರೆಪ್ಪ ಅವರು ಕಳೆದ ವರ್ಷದ ಏಪ್ರಿಲ್ 15ರಂದು ಆಯೋಗಕ್ಕೆ ದೂರು ಸಲ್ಲಿಸಿದ್ದರು. ದಾಖಲೆಗಳನ್ನು ಪರಿಶೀಲಿಸಿದ ಆಯೋಗ ಗ್ರಾಹಕರಿಗೆ ಸಂಪೂರ್ಣ ಸೇವೆ ಒದಗಿಸಲು ವಿಫಲವಾಗಿದೆ ಎನ್ನುವ ತೀರ್ಮಾನಕ್ಕೆ ಬಂದು ವಿಶಾಲ್‌ ಮಾರ್ಟ್‌ಗೆ ದಂಡ ವಿಧಿಸಿದೆ.

ನಿಯಮ ಉಲ್ಲಂಘಿಸಿದ್ದಕ್ಕೆ ಪರಿಹಾರವಾಗಿ ದೂರುದಾರರಿಗೆ 45 ದಿನಗಳಲ್ಲಿ ₹ 8 ಸಾವಿರ ಪಾವತಿಸಬೇಕು. ನ್ಯಾಯಾಲಯದ ವೆಚ್ಚವಾಗಿ ₹ 5 ಸಾವಿರ ಕೊಡಬೇಕು. ಚೀಲದ ವೆಚ್ಚ ₹ 18 ಮರಳಿ ಕೊಡಬೇಕು ಎಂದು ತೀರ್ಪು ನೀಡಿದೆ. ಪ್ರಕರಣದಲ್ಲಿ ಅನಿಲಕುಮಾರ ಕೇಶವರಾವ್ ಹಾಗೂ ಮಾರೆಪ್ಪ ಯಾದವ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT