ಮಂಗಳವಾರ, ಜೂನ್ 22, 2021
22 °C
ಇನ್ನೂ ಪೂರ್ಣವಾಗದ ನಿರಂತರ ನೀರು ಯೋಜನೆ

ಮುದಗಲ್‌: ಕನಸಾಗಿಯೇ ಉಳಿದ ಶುದ್ಧ ನೀರು

ಶರಣಪ್ಪ ಆನೆಹೊಸೂರು Updated:

ಅಕ್ಷರ ಗಾತ್ರ : | |

Prajavani

ಮುದಗಲ್: ಪಟ್ಟಣದಲ್ಲಿ ಜನರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಹೀಗಾಗಿ ಕೆಲವೆಡೆ ನಿರುಪಯುಕ್ತವಾಗಿ ನಿಂತಿವೆ. ಜನರು ಸಂಕಷ್ಟ ಅನುಭವಿಸುವಂತಾಗಿದ್ದು, ಬೇರೆ ಗ್ರಾಮಗಳಿಂದ ನೀರು ತಂದುಕೊಳ್ಳುವ ಅನಿವಾರ್ಯತೆ ಎದುರಾಗಿದೆ.

ಮುದಗಲ್ ಹೋಬಳಿ ವ್ಯಾಪ್ತಿಯಲ್ಲಿ 1.5 ಲಕ್ಷ ಜನಸಂಖ್ಯೆಯಿದ್ದು, 58 ಗ್ರಾಮಗಳು 10 ಕ್ಕೂ ಹೆಚ್ಚು ತಾಂಡಾಗಳಿವೆ. ಒಟ್ಟು 30ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, 10 ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಳಿದ ಘಟಕಗಳು ವಿವಿಧ ಕಾರಣಗಳಿಂದ ಸ್ಥಗಿತಗೊಂಡಿವೆ. ಬೇಸಿಗೆಯಲ್ಲಿ ನೀರಿನ ಬವಣೆ ಆರಂಭವಾಗಿದೆ.

ಮೋಟಾರ್‌ ಪಂಪ್‌ ದುರಸ್ತಿ, ಹಾಳಾದ ಉಪಕರಣಗಳು, ಪೂರೈಕೆಯಾಗದ ನೀರು, ಯಂತ್ರವನ್ನು ಅಳವಡಿಸದೇ ಇರುವುದು, ಒಡೆದಿರುವ ಪೈಪ್‌ಲೈನ್‌... ಹೀಗೆ ನಾನಾ ಕಾರಣಗಳಿಂದಾಗಿ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಬವಣೆ ಪಡುತ್ತಿದ್ದಾರೆ. 

ಮಾಕಾಪುರ, ಪಿಕಳಿಹಾಳ, ಉಳಿಮೇಶ್ವರ, ಆಮದಿಹಾಳ, ಆಶಿಹಾಳ ತಾಂಡಾದಲ್ಲಿ ಶುದ್ಧ ಕುಡಿವ ನೀರಿನ ಘಟಕ ಬಂದ್‌ ಆಗಿವೆ. ಕೆಲವು ಗ್ರಾಮಗಳಲ್ಲಿ ಘಟಕದ ನೀರನ್ನು ಸಮಪರ್ಕವಾಗಿ ಬಳಕೆ ಮಾಡದ ಕಾರಣ ಘಟಕಗಳ ಸ್ಥಾಪನೆ ನಿರರ್ಥಕವಾಗಿದೆ. ಕೆಲವೆಡೆ ನಿರ್ವಹಣೆ ಕೊರತೆಯಿಂದ ಘಟಕಗಳು ಆಗಾಗ್ಗೆ ರಿಪೇರಿಗೆ ಬರುತ್ತಿವೆ. ಕೆಲ ಗ್ರಾಮಗಳಲ್ಲಿ ಪ್ಲೋರೈಡ್ ಯುಕ್ತ ನೀರು ಸೇವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನೀರು ಸೇವಿಸುವುದರಿಂದ ಇಡೀ ಗ್ರಾಮದ ಜನರು ಕೈ-ಕಾಲು ನೋವಿನಿಂದ ಅನಾರೋಗಕ್ಕೆ ತುತ್ತಾಗುತ್ತಿದ್ದಾರೆ.

ನನೆಗುದಿಗೆ ಬಿದ್ದ ಯೋಜನೆ: ಮುದಗಲ್ ಪಟ್ಟಣದಲ್ಲಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಯಮಿತ ಸಂಸ್ಥೆ ಅನುದಾನದಲ್ಲಿ ಮತ್ತು ಪುರಸಭೆ ವತಿಯಿಂದ ಮುದಗಲ್ ಪಟ್ಟಣಕ್ಕೆ ನಿರಂತರ ನೀರು ಸರಬರಾಜು ಮಾಡುವ  ನೀರಿನ ಟ್ಯಾಂಕ್  ಪೂರ್ಣಗೊಳ್ಳದೇ ನಾಲ್ಕು ವರ್ಷದಿಂದ ನನೆಗುದಿಗೆ ಬಿದ್ದಿದೆ.

ಪಟ್ಟಣದಲ್ಲಿ ಸದ್ಯ ಒಂದು ನೀರಿನ ಟ್ಯಾಂಕ್ ಇದೆ. ಜನರಿಗೆ ಏಳು ದಿನಕ್ಕೆ ಒಮ್ಮೆ ನೀರು ಪೂರೈಕೆಯಾಗುತ್ತಿದೆ. ಜನಸಂಖ್ಯೆ ಅನುಗುಣವಾಗಿ ನೀರು ದೊರೆಯುತ್ತಿಲ್ಲ. ಜನರು ಕುಡಿಯುವ ನೀರಿಗಾಗಿ ತೊಂದರೆ ಅನುಭವಿಸುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು