ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು: ಮಡಿಕೆ ಕಟ್ಟಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯ

Published 12 ಏಪ್ರಿಲ್ 2024, 13:46 IST
Last Updated 12 ಏಪ್ರಿಲ್ 2024, 13:46 IST
ಅಕ್ಷರ ಗಾತ್ರ

ಸಿಂಧನೂರು: ನಗರದ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಉದ್ಯಾನದಲ್ಲಿ ಸುರೇಶ ಹಚ್ಚೊಳ್ಳಿ ಸುಕಾಲಪೇಟೆ ಅಭಿಮಾನಿಗಳ ಬಳಗ ಹಾಗೂ ವನಸಿರಿ ಫೌಂಡೇಶನ್ ಸಹಯೋಗದಲ್ಲಿ ಗಿಡ ಮರಗಳಿಗೆ ಮಣ್ಣಿನ ಮಡಿಕೆ ಕಟ್ಟಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯ ನಡೆಸಲಾಯಿತು.

ನಂತರ ಯುವ ಮುಖಂಡ ಸುರೇಶ ಹಚ್ಚೊಳ್ಳಿ ಮಾತನಾಡಿ,‘ಈ ಬೇಸಿಗೆಯಲ್ಲಿ ಮನುಷ್ಯರೇ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಬಂದಿದೆ. ಇಂಥ ಸಂದರ್ಭದಲ್ಲಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ಮನೆಗಳ ಮೇಲೆ, ಕಾಂಪೌಂಡ್ ಆವರಣದಲ್ಲಿರುವ ಗಿಡಮರಗಳಿಗೆ ಮಣ್ಣಿನ ಮಡಿಕೆಗಳನ್ನು ಕಟ್ಟಿ ಪ್ರತಿನಿತ್ಯ ನೀರು, ಕಾಳು ಇಡುವ ಮೂಲಕ ಪಕ್ಷಿಗಳ ಸಂರಕ್ಷಣೆಗೆ ಮುಂದಾಗಬೇಕು’ ಎಂದು ಹೇಳಿದರು.

ವನಸಿರಿ ಫೌಂಡೇಶನ್ ಸಂಸ್ಥಾಪಕ ಅಮರೇಗೌಡ ಮಲ್ಲಾಪುರ, ಮುಖಂಡರಾದ ಶಂಭಣ್ಣ.ಬಿ, ನಾಗಾರಾಜ, ಮಂಜುನಾಥ ಗಾಣಗೇರಾ, ನಿರುಪಾದಿ ಸುಕಾಲಪೇಟೆ, ನಾಗರಾಜ ಬಾಗೋಡಿ, ರಾಮಕೃಷ್ಣ ಹಾಗೂ ನಿಂಗಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT