ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲೈಂಗಿಕ ಶಿಕ್ಷಣದ ಪರಿಜ್ಞಾನವಿಲ್ಲ’

Last Updated 1 ಡಿಸೆಂಬರ್ 2022, 14:45 IST
ಅಕ್ಷರ ಗಾತ್ರ

ರಾಯಚೂರು: ಮಕ್ಕಳಿಗೆ ಸರಿಯಾದ ಲೈಂಗಿಕ ಶಿಕ್ಷಣದ ಪರಿಜ್ಞಾನವಿಲ್ಲದೆ ಅವರು ಏಡ್ಸ್ ಮಹಾಮಾರಿ ರೋಗಕ್ಕೆ ತುತ್ತಾಗುತಿದ್ದಾರೆ ಎಂದು ನವೋದಯ ವೈದ್ಯಕೀಯ ಮಹಾವಿದ್ಯಾಲಯದ ಕಮ್ಯೂನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥೆ ಡಾ.ಗೀತಾಲಕ್ಷ್ಮೀ ಹೇಳಿದರು.

ನವೋದಯ ಶಿಕ್ಷಣ ಮಹಾವಿದ್ಯಾಲಯ ಮತ್ತು ಕಮ್ಯೂನಿಟಿ ಮೆಡಿಸಿನ್ ವಿಭಾಗ ,ನವೋದಯ ವೈದ್ಯಕೀಯ ಮಹಾವಿದ್ಯಾಲಯದಿಂದ ಗುರುವಾರ ಏರ್ಪಡಿಸಿದ್ದ ‘ವಿಶ್ವ ಏಡ್ಸ್ ದಿನ ಆಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತದಲ್ಲಿ ಶಿಕ್ಷಣದ ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ಸರ‍್ಪಡಿಸುವ ಕುರಿತು ಹಲವಾರು ರೀತಿಯ ದ್ವಂದ್ವ ನಿಲುವುಗಳು ಈ ಸಮಾಜದಲ್ಲಿ ಇವೆ ಎಂದರು.

ವಿಶೇಷ ಆಹ್ವಾನಿತ ಸಂಪನ್ಮೂಲ ವ್ಯಕ್ತಿ ಡಾ.ಲಕ್ಷ್ಮೀದೇವಿ ಪಾಟೀಲ ಮಾತನಾಡಿ, ಏಡ್ಸ್ ರೋಗವು ಹರಡುವ ಬಗೆ ಮತ್ತು ಏಡ್ಸ್ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಹ ವಿಸ್ತಾರವಾಗಿ ಮಾಹಿತಿಯನ್ನು ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಉಮಾಕಾಂತ .ಜಿ.ದೇವರಮನಿ ಮಾತನಾಡಿದರು. ಡಾ.ರತನ್ ಚವಾಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮಾವತಿ ಎಸ್ .ನಾಯಕ ನಿರೂಪಿಸಿದರು .ಉಮಾಶ್ರೀ ಬಿ.ಕೆ. ಸ್ವಾಗತಿಸಿದರು. ವಿಜಯಕುಮಾರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT