ಸಿಂಧನೂರು: ಪ್ರತಿಯೊಬ್ಬ ಮಗುವಿಗೆ ಉತ್ತಮ ಶಿಕ್ಷಣ ದೊರಕುವಂತೆ ಮಾಡುವ ನಿಟ್ಟಿನಲ್ಲಿ ಪಾಲಕರ ಕರ್ತವ್ಯ ಅತ್ಯಂತ ಮುಖ್ಯವಾದದ್ದು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಯಂಕೋಬಣ್ಣ ಬಸಾಪುರ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸಾಸಲಮರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಶಾಲೆಗಾಗಿ ನಾವು-ನೀವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಸಿಆರ್ಪಿ ನಿಂಗಪ್ಪ ಬಿರಾದರ ಮಾತನಾಡಿ, ಪಾಲಕರು ಮಕ್ಕಳಿಗೆ ಕೊಡಿಸುವ ಶಿಕ್ಷಣವೇ ಅವರಿಗೆ ಮಾಡುವ ದೊಡ್ಡ ಆಸ್ತಿಯಾಗಿದೆ ಎಂದರು.

ಎಸ್ಡಿಎಂಸಿ ಅಧ್ಯಕ್ಷ ಲಿಂಗಪ್ಪ ಎನ್. ಅಧ್ಯಕ್ಷತೆ ವಹಿಸಿದ್ದರು. ಮುಖ್ಯಗುರು ಶರಣಪ್ಪಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಮುಖಂಡರಾದ ಎಸ್.ಮಲ್ಲಪ್ಪ ರೂ.2ಸಾವಿರ, ಎಸ್.ಮುದುಕಪ್ಪ ಮತ್ತು ಬಸನಗೌಡ ತಲಾ ಒಂದು ಸಾವಿರ, ಎಂ.ಸರಸ್ವತಿ 15ಲೀಟರ್ ಕುಕ್ಕರ್, ಎಂ.ವೆಂಕೋಬಣ್ಣ 12 ತಟ್ಟೆಗಳನ್ನು ಶಾಲೆಗೆ ದೇಣಿಗೆ ನೀಡಿದರು. ಹೊನ್ನಪ್ಪ, ರಂಗನಗೌಡ, ಚನ್ನಬಸಯ್ಯ ಮತ್ತಿತರರು ಭಾಗವಹಿಸಿದ್ದರು.

ಸಾಸಲಮರಿಕ್ಯಾಂಪ್: ಸಾಸಲಮರಿ ಕ್ಯಾಂಪಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಗಾಗಿ ನಾವು-ನೀವು ಕಾರ್ಯಕ್ರಮವನ್ನು ಸಿಆರ್ಪಿ ನಿಂಗಪ್ಪ ಉದ್ಘಾಟಿಸಿದರು.ಮುಖ್ಯೋಪಾಧ್ಯಾಯಿನಿ ಇಂದಿರಾ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಶಿಕ್ಷಕ ಸೋಮಣ್ಣ ಮಾತನಾಡಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ರಾಮಬಾಬು ಶಾಲೆಗೆ 5ಸಾವಿರ ರೂಪಾಯಿ ದೇಣಿಗೆ ನೀಡಿದರು. ಬೀರೇಶ ಸ್ವಾಗತಿಸಿದರು. ಶಿಕ್ಷಕ ಮಲ್ಲಿಕಾರ್ಜುನ ನಿರೂಪಿಸಿದರು.

ಮುಕ್ಕುಂದಾ ಪ್ರೌಢಶಾಲೆ: ತಾಲ್ಲೂಕಿನ ಮುಕ್ಕುಂದಾ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಭಾತ್ಪೇರಿಯೊಂದಿಗೆ ಆಚರಿಸಲಾಯಿತು. ನಂತರ ನಡೆದ ಕಾರ್ಯಕ್ರಮವನ್ನು ಎಪಿಎಂಸಿ ನಿರ್ದೇಶಕ ರಾಮಣ್ಣ ಉದ್ಘಾಟಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಅಮಾಜಪ್ಪ ಶಿಕ್ಷಣ ಹಕ್ಕು ಮಾಹಿತಿ ನೀಡುವ ಬಿತ್ತಿಪತ್ರ ಉದ್ಘಾಟಿಸಿದರು. ಸಾವಯವ ಕೃಷಿಕ ಮುದೇಗೌಡರು ಮಾತನಾಡಿ, ಶಿಕ್ಷಕರು ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಪ್ರೇರಣೆ ನೀಡಬೇಕು ಎಂದರು. ರಂಗಮ್ಮ ಪ್ರಮೋದ್ ಅನಿಸಿಕೆ ವ್ಯಕ್ತಪಡಿಸಿದರು.

ದೇವರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಗುರು ಮರ್ದಾನಲಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ರುದ್ರಮುನಿಸ್ವಾಮಿ, ಲಕ್ಷ್ಮೀ, ಚನ್ನಬಸಪ್ಪ ಸಾಹುಕಾರ, ಚಂದ್ರಶೇಖರರೆಡ್ಡಿ, ಎಸ್ಡಿಎಂಸಿ ಸದಸ್ಯರಾದ ಶರಣೇಗೌಡ ರಂಗನಗೌಡ, ಗ್ರಾಮದ ಮುಖಂಡರಾದ ಜಡಿಯಪ್ಪ, ಲಿಂಗಪ್ಪ, ಶಿಕ್ಷಕರಾದ ನಾಗರಾಜ ವಾಲು, ಫಹೀಮಾ, ಪ್ರೇಮವಾಣಿ, ಮಂಜುನಾಥ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಉಮಾದೇವಿ, ಮಂಜುಳಾ ಪ್ರಾರ್ಥಿಸಿದರು. ಕನ್ನಡ ಶಿಕ್ಷಕ ಮಲ್ಲಯ್ಯ ಸ್ವಾಗತಿಸಿದರು. ಹಿಂದಿ ಶಿಕ್ಷಕ ರಾಜಾಸಾಬ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.