ರಾಯಚೂರು: 2013ರ ಡಿಸೆಂಬರ್ ತಿಂಗಳಿನಿಂದಲೇ ಬಿಸಿಯೂಟ ನೌಕರರ ಗೌರವಧನ ₨ 5,00ನ್ನು ಹೆಚ್ಚುವರಿಯಾಗಿ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ (ಸಿಐಟಿಯು ಸಂಯೋಜಿತ) ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಬಗ್ಗೆ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಸಂಘಟನೆ ನಿರಂತರ ಹೋರಾಟದ ಬಳಿಕ ನವೆಂಬರ್ ತಿಂಗಳಿನಲ್ಲಿ ಸರ್ಕಾರವು ಭರವಸೆ ನೀಡಿತ್ತು. 2013ರ ಡಿಸೆಂಬರ್ ತಿಂಗಳಿನಿಂದ ಗೌರವಧನ ₨ 5,00 ಹೆಚ್ಚಿಸುವುದಾಗಿ ತಿಳಿಸಲಾಗಿತ್ತು. ಆದರೆ, ಪತ್ರದಲ್ಲಿ 2014 ಏಪ್ರಿಲ್ನಿಂದ ಜಾರಿಗೊಳಿಸಲಾಗುವುದು ಎಂದು ಆದೇಶಿಸಲಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನ ನೀಡಿದರೆ, ಅದನ್ನು ರಾಜ್ಯ ಸರ್ಕಾರವು ಕೊಡುವ ಸಂಭಾವನೆಯಲ್ಲಿ ಕಡಿತಗೊಳಿಸಬಾರದು ಹಾಗೂ 2013ರ ಡಿಸೆಂಬರ್ ತಿಂಗಳಿನಿಂದಲೇ ಹೆಚ್ಚುವರಿ ಗೌರವಧನ ₨ 5,00 ನೀಡಬೇಕು ಎಂದು ಸಿಐಟಿಯು ಸಂಘಟನೆ ಜಿಲ್ಲಾ ಘಟಕ ಅಧ್ಯಕ್ಷೆ ಎಚ್.ಪದ್ಮಾ, ಉಪಾಧ್ಯಕ್ಷ ಜೆ.ಎಂ ಚನ್ನಬಸಯ್ಯ ಜಿಲ್ಲಾಧಿಕಾರಿಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದ್ದಾರೆ.ಪದಾಧಿಕಾರಿಗಳಾದ ರೇಣುಕಮ್ಮ, ಮರಿಯಮ್ಮ, ನಾಗಮ್ಮ, ಕಲ್ಯಾಣಿ, ಶ್ರೀಲೇಖ, ಹನುಮಂತಿ, ಶೋಭಾ, ಶರಣಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.