ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ನಾಳೆ ನಾಡಿದ್ದು ಮನೆಯಿಂದಲೇ ಮತದಾನ

85 ವರ್ಷ ಮೇಲ್ಪಟ್ಟವರು, ಅಂಗವಿಕಲರ ಮನೆಗೆ ತೆರಳಲು 13 ತಂಡ ರಚನೆ
Published 12 ಏಪ್ರಿಲ್ 2024, 5:42 IST
Last Updated 12 ಏಪ್ರಿಲ್ 2024, 5:42 IST
ಅಕ್ಷರ ಗಾತ್ರ

ರಾಮನಗರ: ‘ಲೋಕಸಭಾ ಚುನಾವಣೆಯ ಮತದಾನದ ದಿನದಂದು ಮತಗಟ್ಟೆಗೆ ಬಂದು ಮತ ಚಲಾಯಿಸಲು ಸಾಧ್ಯವಾಗದ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ಅಶಕ್ತ ಅಂಗವಿಕಲರ ಮನೆ ಮನೆಗೆ ಹೋಗಿ ಮತ ಚಲಾವಣೆ ಮಾಡಿಸುವ ಕಾರ್ಯವನ್ನು ಏಪ್ರಿಲ್ 13 ಮತ್ತು 14ರಂದು ಹಮ್ಮಿಕೊಳ್ಳಲಾಗಿದೆ’ ಎಂದು ರಾಮನಗರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಪಿ.ಕೆ. ಬಿನೋಯ್ ಹೇಳಿದರು.

‘ಅಶಕ್ತರ ಮನೆಗಳಿಗೆ ತೆರಳಿ ಮತದಾನ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕಾಗಿ 13 ತಂಡ ರಚಿಸಲಾಗಿದೆ. ಮನೆಯಿಂದಲೇ ಮತ ಚಲಾಯಿಸಲು 308 ಮತದಾರರು ನೋಂದಣಿ ಮಾಡಿಕೊಂಡಿದ್ದು, ಅವರ ಮನೆಗೆ ತಂಡಗಳು ಹೋಗಲು ಮಾರ್ಗ ಸಿದ್ಧಪಡಿಸಲಾಗಿದೆ. ಮತದಾರರಿಗೆ ನೋಟಿಸ್ ನೀಡಿ ದಿನಾಂಕ ತಿಳಿಸಲಾಗಿದೆ’ ಎಂದು ನಗರದ ತಾಲ್ಲೂಕು ಆಡಳಿತ ಸೌಧದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ತಂಡಗಳು ಯಾವ ಸಮಯದಲ್ಲಿ, ಎಲ್ಲಿಂದ, ಎಲ್ಲಿಗೆ ಹೋಗುತ್ತವೆ ಎಂಬ ಮಾಹಿತಿಯನ್ನು ರಾಜಕೀಯ ಪಕ್ಷಗಳಿಗೂ ನೀಡಲಾಗಿದೆ. ಮತದಾನ ಪ್ರಕ್ರಿಯೆಯು ಪಾರದರ್ಶಕವಾಗಿರುವಂತೆ ನೋಡಿಕೊಳ್ಳುವುದಕ್ಕಾಗಿ ತಮ್ಮ ಏಜೆಂಟರು ಹಾಜರಿರುವಂತೆ ಪಕ್ಷಗಳಿಗೆ ತಿಳಿಸಲಾಗಿದೆ. ಇಡೀ ಪ್ರಕ್ರಿಯೆಯನ್ನು ವಿಡಿಯೊ ಚಿತ್ರೀಕರಣ ಮಾಡಲಾಗುತ್ತದೆ’ ಎಂದರು.

‘ಮತದಾರರ ಮನೆಗೆ ತೆರಳುವ 5 ಮಂದಿಯ ತಂಡದಲ್ಲಿ ಇಬ್ಬರು ಮತಗಟ್ಟೆ ಅಧಿಕಾರಿ, ತಲಾ ಒಬ್ಬರು ಪೊಲೀಸ್, ವಿಡಿಯೊಗ್ರಾಫರ್ ಹಾಗೂ ಸೂಕ್ಷ್ಮ ವೀಕ್ಷಕರು ಇರಲಿದ್ದಾರೆ. ವಲಯ ಅಧಿಕಾರಿಗಳು ಮತದಾನದ ಮೇಲ್ವಿಚಾರಣೆ ಮಾಡಲಿದ್ದಾರೆ’ ಎಂದು ಹೇಳಿದರು.

‘ಈಗಾಗಲೇ ಮನೆಮನೆ ಮತದಾನಕ್ಕೆ ನೋಂದಣಿ ಮಾಡಿಕೊಂಡಿರುವವರು, ತಮಗೆ ತಿಳಿಸಿರುವ ನಿಗದಿತ ದಿನಾಂಕದಂದು ಮನೆಯಲ್ಲಿ ಹಾಜರಿದ್ದು ತಮ್ಮ ಹಕ್ಕು ಚಲಾಯಿಸಬೇಕು. ಚುನಾವಣಾ ಆಯೋಗ ಕಲ್ಪಿಸಿರುವ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ತಹಸೀಲ್ದಾರ್ ಬಿ. ತೇಜಸ್ವಿನಿ ಇದ್ದರು.

ಮನೆ ಮನೆ ಮತದಾನಕ್ಕೆ 13 ತಂಡ ರಚನೆ ಪ್ರತಿ ತಂಡದಲ್ಲಿರಲಿದ್ದಾರೆ ಐವರು ಸಿಬ್ಬಂದಿ ಕ್ಷೇತ್ರದಲ್ಲಿ 308 ಮತದಾರರಿಂದ ನೋಂದಣಿ
ಮೊದಲ ದಿನ ಮತದಾನ ಮಾಡಲು ಸಾಧ್ಯವಾಗದವರಿಗೆ ಎರಡನೇ ಬಾರಿ ನೋಟೀಸ್ ನೀಡಿ ತಿಳಿಸಲಾಗುತ್ತದೆ. ಎರಡನೇ ದಿನವೂ ಮತದಾನ ಮಾಡದಿದ್ದರೆ ಮೂರನೇ ಸಲ ಮತದಾನಕ್ಕೆ ಅವಕಾಶವಿರುವುದಿಲ್ಲ
– ಪಿ.ಕೆ. ಬಿನೋಯ್ ಸಹಾಯಕ ಚುನಾವಣಾಧಿಕಾರಿ ರಾಮನಗರ ವಿಧಾನಸಭಾ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT