ಶನಿವಾರ, ಜೂನ್ 19, 2021
26 °C

ರಾಮನಗರ: 52 ಮಂದಿಗೆ ಕೊರೊನಾ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜಿಲ್ಲೆಯಲ್ಲಿ ಗುರುವಾರ 52 ಮಂದಿಯಲ್ಲಿ ಹೊಸತಾಗಿ ಕೋವಿಡ್‌ ಸೋಂಕು ದೃಢವಾಗಿದೆ.

ಚನ್ನಪಟ್ಟಣ 8, ಕನಕಪುರ 15, ಮಾಗಡಿ 11 ಮತ್ತು ರಾಮನಗರ 18 ಪ್ರಕರಣಗಳು ಇದರಲ್ಲಿ ಸೇರಿವೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 2548ಕ್ಕೆ ಏರಿಕೆ ಆಗಿದೆ. ಈ ಪೈಕಿ ಚನ್ನಪಟ್ಟಣ 592, ಕನಕಪುರ 527, ಮಾಗಡಿ 399 ಮತ್ತು ರಾಮನಗರ 1030 ಪ್ರಕರಣಗಳು ಸೇರಿವೆ.

ಸಾವು: ಮಾಗಡಿ ತಾಲ್ಲೂಕಿನ ವ್ಯಕ್ತಿಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ಮೃತಪಟ್ಟಿದ್ದಾರೆ. ಸೋಂಕಿನಿಂದ ನಿಧನರಾದವರ ಒಟ್ಟು ಸಂಖ್ಯೆ 29ಕ್ಕೆ ಏರಿಕೆ ಆಗಿದೆ.

ಗುಣಮುಖ: ಚನ್ನಪಟ್ಟಣ ತಾಲ್ಲೂಕಿನಲ್ಲಿ 12, ಕನಕಪುರ ತಾಲ್ಲೂಕಿನಲ್ಲಿ 5, ಮಾಗಡಿ ತಾಲ್ಲೂಕಿನಲ್ಲಿ 1 ಹಾಗೂ ರಾಮನಗರ ತಾಲ್ಲೂಕಿನಲ್ಲಿ 7 ಜನ ಸೇರಿ ಒಟ್ಟಾರೆ 25 ಜನರು ಗುರುವಾರ ಸೋಂಕಿನಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 1690 ಜನರು ಗುಣಮುಖರಾಗಿದ್ದಾರೆ. ಇನ್ನೂ 777 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು