ಮಾಗಡಿ: ಬೆಂಗಳೂರು-ಮೈಸೂರು ರಸ್ತೆಯ ಪಿಇಎಸ್ ಕಾಲೇಜು ಬಳಿ ಬುಧವಾರ ಬೈಕ್ಗೆ ಕಾರು ಡಿಕ್ಕಿ ಹೊಡೆದು ಬೈಕ್ನಲ್ಲಿದ್ದ ಶಿಕ್ಷಣ ಇಲಾಖೆಯ ಮಹಿಳಾ ಸಿಬ್ಬಂದಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಾಗಡಿ ಕ್ಷೇತ್ರ ಶಿಕ್ಷಣ ಅಧಿಕಾರಿ (ಬಿಇಒ) ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿ ರಕ್ಷಿತ (26) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ರಕ್ಷಿತ ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವರು.

ಬೆಂಗಳೂರಿನ ಬಸವನಗುಡಿ ವಿದ್ಯಾಪೀಠದ ಬಳಿ ಸಹೋದರನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.ಕೆಲಸಕ್ಕಾಗಿ ಪ್ರತಿದಿನ ಬೆಂಗಳೂರಿನಿಂದ ಮಾಗಡಿಗೆ ಬಂದು ಹೋಗುತ್ತಿದ್ದರು.

ಮಾಗಡಿ ರಂಗನಾಥ ಜಾತ್ರೆ ಅಂಗವಾಗಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ನಡೆದ ಚಿತ್ರಮಂಟಪ ಉತ್ಸವದಲ್ಲಿ ಭಾಗವಹಿಸಿ ದೇವಾಲಯದ ಮುಂಭಾಗ ಶಿಕ್ಷಕಿಯರೊಂದಿಗೆ ನರ್ತಿಸಿ ಎಲ್ಲರ ಗಮನ ಸೆಳೆದಿದ್ದರು.

ಮಾಗಡಿಯಿಂದ ಬೆಂಗಳೂರಿಗೆ ಹೊರಟಿದ್ದ ಅವರು ಬಸ್ನಲ್ಲಿ ಗೊಲ್ಲರಹಟ್ಟಿಗೆ ಬಂದಿದ್ದು, ಅಲ್ಲಿಂದ ತಮ್ಮ ಬೈಕ್ನಲ್ಲಿ ವಿದ್ಯಾಪೀಠದತ್ತ ತೆರಳುವಾಗ ಈಗ ಘಟನೆ ನಡೆದಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಸೇರಿದಂತೆ ತಾಲ್ಲೂಕು ಶಿಕ್ಷಣ ಇಲಾಖೆ ಮೃತರಿಗೆ ಶ್ರದ್ಧಾಂಜಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.